ಪ್ರಗತಿವಾಹಿನಿ ಸುದ್ದಿ; ನವದೆಹಲಿ: ದೇಶಾದ್ಯಂತ ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಭಾರತದಲ್ಲಿ 20 ಕೊರೊನಾ ಹಾಟ್ ಸ್ಪಾಟ್ ಗಳನ್ನು ಗುರುತಿಸಿದೆ. ದೇಶದ ಯಾವ ಭಾಗದಲ್ಲಿ ಹೆಚ್ಚು ಕೊರೊನಾ ಸೋಂಕಿತರಿರುವರೋ ಆ ಭಾಗವನ್ನು ಕೊರೊನಾ ಹಾಟ್ ಸ್ಪಾಟ್ ಎಂದು ಗುರುತಿಸಲಾಗಿದೆ.
ಕೊರೊನಾ ಸೋಂಕಿಗೆ ದೇಶದಲ್ಲಿ ಈ ವೈರಸ್ಗೆ 50 ಮಂದಿ ಬಲಿಯಾಗಿದ್ದಾರೆ. ಜತೆಗೆ ಸೋಂಕಿತರ ಸಂಖ್ಯೆ 1,965ಕ್ಕೆ ಏರಿಕೆಯಾಗಿದೆ. ಸೋಂಕು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಕೊರೋನಾ ಹಾಟ್ಸ್ಪಾಟ್ಗಳನ್ನು ಗುರುತಿಸಿದ್ದು, ಇದರಲ್ಲಿ ದೆಹಲಿ, ಬೆಂಗಳೂರು, ಕಾಸರಗೋಡು, ಮುಂಬೈ ಕೂಡ ಸೇರಿದೆ. ಈ ಪ್ರದೇಶಗಳಲ್ಲಿ ಮುಂಜಾಗೃತ ಕ್ರಮವಾಗಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.
ಕೊರೊನಾ ಹಾಟ್ ಸ್ಪಾಟ್ ಪ್ರದೇಶ:
ಅಹಮದಾಬಾದ್-ಗುಜರಾತ್
ಇಂದೋರ್- ಮಧ್ಯಪ್ರದೇಶ
ನವಾನ್‌ಶಹರ್-ಪಂಜಾಬ್
ಪಥನಮತ್ತಟ್ಟ-ಕೇರಳ
ಕಾಸರಗೋಡು-ಕೇರಳ
ನೋಯ್ಡಾ-ಉತ್ತರ ಪ್ರದೇಶ
ದಿಲ್ಶಾದ್ ಗಾರ್ಡನ್-ದೆಹಲಿ
ನಿಜಾಮುದ್ದೀನ್-ದೆಹಲಿ
ಪುಣೆ-ಮಹಾರಾಷ್ಟ್ರ
ಬೆಂಗಳೂರು-ಕರ್ನಾಟಕ
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು
ಈರೋಡ್-ತಮಿಳುನಾಡು
ಮೀರತ್-ಉತ್ತರ ಪ್ರದೇಶ
ಭಿಲ್ವಾರಾ-ರಾಜಸ್ಥಾನ
ಜೈಪುರ-ರಾಜಸ್ಥಾನ
ಮುಂಬೈ-ಮಹಾರಾಷ್ಟ್ರ
ಇದುವರೆಗೂ ಭಾರತದಲ್ಲಿ ಸುಮಾರು 1,965 ಜನರಿಗೆ ಕೊರೋನಾ ಸೋಂಕು ಹರಡಿದೆ. ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ 335ಕ್ಕೆ ಏರಿಕೆಯಾಗಿದೆ. ಆಂಧ್ರಪ್ರದೇಶದಲ್ಲಿ ಸೋಂಕಿತರ ಸಂಖ್ಯೆ 111ಕ್ಕೆ ಏರಿಕೆಯಾಗಿದೆ. ಕರ್ನಾಟಕದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 124ಕ್ಕೆ ಏರಿಕೆಯಾಗಿದ್ದು, 3 ಜನ ಸಾವನ್ನಪ್ಪಿದ್ದಾರೆ. ಈ ನಡುವೆ ದೆಹಲಿಯ ನಿಜಾಮುದ್ದೀನ್ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡವರಿಗೆ ಕೊರೋನಾ ಸೋಂಕು ಕಂಡುಬರುತ್ತಿರುವುದರಿಂದ 150ಕ್ಕೂ ಹೆಚ್ಚು ಹೊಸ ಸೋಂಕಿತ ಪ್ರಕರಣಗಳು ಬೆಳಕಿಗೆ ಬಂದಿವೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ