ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಇಂದು ಒಂದೇ ದಿನದಲ್ಲಿ 299 ಜನರಲ್ಲಿ ಸೋಂಕು ಪತ್ತೆಯಾಗಿದೆ. ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 3,221 ಕ್ಕೇರಿಕೆಯಾಗಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿರುವ ಬುಲೆಟಿನ್ ಪ್ರಕಾರ, ಬೆಂಗಳೂರು 21, ಯಾದಗಿರಿ 44, ಕಲಬುರಗಿ 28, ಮಂಡ್ಯ 13, ರಾಯಚೂರು 83, ಉಡುಪಿ 10, ಬೀದರ್ 33, ಬೆಳಗಾವಿ 13, ದಾವಣಗೆರೆ 6, ದಕ್ಷಿಣ ಕನ್ನಡ 14, ವಿಜಯಪುರ 26, ಬಳ್ಳಾರಿ 1, ಶಿವಮೊಗ್ಗ 1, ಕೋಲಾರ 1 ಪ್ರಕರಣ ಬೆಳಕಿಗೆ ಬಂದಿವೆ.
ಬೆಳಗಾವಿಯಲ್ಲಿ 5, ಚಿಕ್ಕೋಡಿಯಲ್ಲಿ 5 ಹಾಗೂ ಹುಕ್ಕೇರಿಯಲ್ಲಿ 3 ಕೊರೋನಾ ಸೋಂಕು ಪತ್ತೆಯಾಗಿದ್ದು, ಎಲ್ಲರೂ ಕ್ವಾರಂಟೈನ್ ನಲ್ಲಿದ್ದವರೇ ಆಗಿದ್ದಾರೆ.
299 ಪ್ರಕರಣಗಳಲ್ಲಿ 255 ಜನರು ಅಂತಾರಾಜ್ಯ ಪ್ರಯಾಣದ ಹಿನ್ನೆಲೆ ಹೊಂದಿದ್ದಾರೆ. ಏಳು ಜನ ಅಂತರಾಷ್ಟ್ರೀಯ ಪ್ರಯಾಣಿಕರಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ