ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದ್ದು, ಇಂದು ಹೊಸದಾಗಿ 5,199 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಈ ಮೂಲಕ ಕೊರೊನಾ ಸೋಂಕಿತರ ಸಂಖ್ಯೆ ರಾಜ್ಯದಲ್ಲಿ 96,141ಕ್ಕೆ ಏರಿಕೆಯಾಗಿದೆ.
ರಾಜಧಾನಿ ಬೆಂಗಳೂರಿನಲ್ಲಿ ಇಂದು 1950 ಜನರಲ್ಲಿ ಸೋಂಕು ಪತ್ತೆಯಾಗಿದ್ದು, ಕಳೆದ ಐದು ದಿನಗಳಿಗೆ ಹೋಲಿಸಿದರೆ ಕೊಂಚ ಕಡಿಮೆಯಾಗಿದೆ ಎನ್ನಬಹುದು. ಇಂದು ಬೆಂಗಳೂರಿನಲ್ಲಿ 29 ಜನ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಈ ಮೂಲಕ ರಾಜಧಾನಿಯಲ್ಲಿ 891 ಜನ ಸೋಂಕಿಗೆ ಸಾವನ್ನಪ್ಪಿದ್ದಾರೆ
ರಾಜ್ಯದಲ್ಲಿ ಇಂದು 82 ಜನ ಸೋಂಕಿಗೆ ಸಾವನ್ನಪ್ಪಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಈ ವರೆಗೆ 1878 ಜನ ಕೊರೊನಾದಿಂದಾಗಿ ಸಾವನ್ನಪ್ಪಿದ್ದಾರೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ಮಾಹಿತಿ ನೀಡಿದ್ದಾರೆ.
ಇಂದು ಬಳ್ಳಾರಿಯಲ್ಲಿ 579, ಮೈಸೂರು 230, ಬೆಂಗಳೂರು ಗ್ರಾಮಂತರ 213, ದಕ್ಷಿಣ ಕನ್ನಡ 199, ಉಡುಪಿ 169, ಧಾರವಾಡ 165, ಹಾಸನ 164, ಬೆಳಗಾವಿ 163, ಕಲಬುರಗಿ 152, ವಿಜಯಪುರ 132, ರಾಯಚೂರು 131, ದಾವಣಗೆರೆ 89, ಉತ್ತರ ಕನ್ನಡ 85, ಚಿಕ್ಕಬಳ್ಳಾಪುರ 81, ಬೀದರ್ 77, ಮಂಡ್ಯ 64, ಗದಗ, ಚಿಕ್ಕಮಗಳೂರು 61, ಯಾದಗಿರಿ 56, ಚಿತ್ರದುರ್ಗ 53, ಕೋಲಾರ 49, ಹಾವೇರಿ 47, ತುಮಕೂರು 46, ಬಾಗಲಕೋಟೆ 41, ಕೊಪಪ್ಳ 40, ಶಿವಮೊಗ್ಗ 39, ಚಾಮರಾಜನಗರ 28, ಕೊಡಗು 20, ರಾಮನಗರ 15 ಜನರಿಗೆ ಸೋಂಕು ಪತ್ತೆಯಾಗಿದೆ.
ಇಂದು ಬೆಂಗಳೂರಿನಲ್ಲಿ 29, ದಕ್ಷಿಣ ಕನ್ನಡ 7, ಬೆಳಗಾವಿ, ಕಲಬುರಗಿ, ಧಾರವಾಡ ತಲಾ 6 ಜನರು ಸಾವಿಗೀಡಾಗಿದ್ದಾರೆ. ತುಮಕೂರು ಹಾಗೂ ಮೈಸೂರಲ್ಲಿ ತಲಾ 5 ಜನ ಮೃತಪಟ್ಟಿದ್ದಾರೆ.
(ವಿವರ ನಿರೀಕ್ಷಿಸಿ)
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ