Kannada News

ರಾಜ್ಯದಲ್ಲಿ ಇಂದು 8 ಕೊರೊನಾ ಕೇಸ್ ಪತ್ತೆ; ಬೆಳಗಾವಿಗೆ ಮತ್ತೆ ಒಕ್ಕರಿಸಿದ ಮಹಾಮಾರಿ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಮಹಾಮಾರಿ ಕೊರೊನಾ ಸೋಂಕಿಗೆ ರಾಜ್ಯದಲ್ಲಿ ಮತ್ತೊಂದು ಬಲಿಯಾಗಿದೆ. ಇದರ ಜತೆಗೆ ಇಂದು ರಾಜ್ಯದಲ್ಲಿ 8 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಈ ಮೂಲಕ ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 701ಕ್ಕೆ ಏರಿಕೆಯಾಗಿದೆ.

ಬೆಳಗಾವಿಯ 13 ವರ್ಷದ ಬಾಲಕಿಯಲ್ಲಿಯೂ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ದಾವಣಗೆರೆ ಜಿಲ್ಲೆಯಲ್ಲಿ ಕೊರೊನಾ ಸೋಂಕಿಗೆ 53 ವರ್ಷದ ಮಹಿಳೆ ಸಾವನ್ನಪ್ಪಿದ್ದಾರೆ. ಈ ಮಹಿಳೆ ಉಸಿರಾಟದ ತೊಂದೆಯಿಂದ(SARI) ಬಳಲುತ್ತಿದ್ದರು. ಇಂದು ಬೆಳಗಾವಿಯಲ್ಲಿ 1, ಬೆಂಗಳೂರಿನಲ್ಲಿ 1, ಕಲಬುರಗಿಯಲ್ಲಿ 3, ದಾವಣಗೆರೆಯಲ್ಲಿ 3 ಕೇಸ್ ಪತ್ತೆಯಾಗಿದೆ.

ಕೆಲದಿನಗಳಿಂದ ಯಾವುದೇ ಕೊರೊನಾ ಹೊಸ ಪ್ರಕರಣ ಪತ್ತೆಯಾಗಿರದ ಬೆಳಗಾವಿಯಲ್ಲಿ ಇಂದು ಹೊಸ ಕೇಸ್ ಪತ್ತೆಯಾಗಿರುವುದು ಕುಂದಾನಗರಿಯಲ್ಲಿ ಮತ್ತೆ ಆತಂಕ ಸೃಷ್ಟಿಸಿದೆ.

ಸೋಂಕಿತರ ವಿವರ:
1. ರೋಗಿ 694: ದಾವಣಗೆರೆಯ 55 ವರ್ಷದ ಮಹಿಳೆ. ತೀವ್ರ ಉಸಿರಾಟದ ತೊಂದರೆ
2. ರೋಗಿ 695: ದಾವಣಗೆರೆಯ 53 ವರ್ಷದ ಮಹಿಳೆ. ಜ್ವರದ ಲಕ್ಷಣಗಳು ಕಾಣಿಸಿಕೊಂಡಿವೆ.
3. ರೋಗಿ 696: ದಾವಣಗೆರೆಯ 40 ವರ್ಷದ ಮಹಿಳೆ. ಜ್ವರದ ಲಕ್ಷಣಗಳು ಕಾಣಿಸಿಕೊಂಡಿವೆ.
4. ರೋಗಿ 697: ಕಲಬುರಗಿ 35 ವರ್ಷದ ಪುರುಷ. ರೋಗಿ ನಂಬರ್ 642ರ ಜೊತೆ ಸಂಪರ್ಕ
5. ರೋಗಿ 698: ಕಲಬುರಗಿಯ 36 ವರ್ಷದ ಪುರುಷ. ರೋಗಿ ನಂಬರ್ 641ರ ಜೊತೆ ಸಂಪರ್ಕ.
6. ರೋಗಿ 699: ಕಲಬುರಗಿಯ 41 ವರ್ಷದ ಪುರುಷ. ರೋಗಿ ನಂಬರ್ 641ರ ಜೊತೆ ಸಂಪರ್ಕ.
7. ರೋಗಿ 700: ಬೆಳಗಾವಿ ಜಿಲ್ಲೆಯ ಹೀರೆ ಬಾಗೇವಾಡಿಯ 13 ವರ್ಷದ ಬಾಲಕಿ. ರೋಗಿ ನಂಬರ್ 364ರ ಜೊತೆ ಸಂಪರ್ಕ.
8. ರೋಗಿ 701: ಬೆಂಗಳೂರಿನ 49 ವರ್ಷದ ಮಹಿಳೆ. ಜ್ವರದ ಲಕ್ಷಣಗಳು ಕಾಣಿಸಿಕೊಂಡಿವೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button