Latest

ಒಂದೇ ದಿನ ಇಹಲೋಕ ತ್ಯಜಿಸಿದ ವಯೋವೃದ್ಧೆ ತಾಯಿ- ಮಗ

ಪ್ರಗತಿವಾಹಿನಿ ಸುದ್ದಿ, ಹಾವೇರಿ: ವಯೋವೃದ್ಧೆ ತಾಯಿ ಹಾಗೂ ಮಗ ಒಂದೇ ದಿನ ಇಹಲೋಕ ತ್ಯಜಿಸುವ ಮೂಲಕ ಸಾವಿನಲ್ಲೂ ಜೊತೆಯಾಗಿದ್ದಾರೆ.

ಸವಣೂರು ತಾಲೂಕಿನ ಕಲಕೋಟಿಯಲ್ಲಿ ಈ ಘಟನೆ ನಡೆದಿದೆ. ಎಲ್ಲವ್ವ ತಿಮ್ಮನಹಳ್ಳಿ (80) ಹಾಗೂ ಅವರ ಪುತ್ರ ಷಣ್ಮುಖಪ್ಪ (45) ಮೃತಪಟ್ಟವರು.

ಎಲ್ಲವ್ವ ಅವರು ತಮ್ಮ ಕಿರಿಯ ಮಗನ ಮನೆಯಲ್ಲಿ ವಾಸವಾಗಿದ್ದರು. ಎಲ್ಲವ್ವ ಮೃತಪಟ್ಟ ವಿಷಯವನ್ನು ಪಕ್ಕದ ಮನೆಯಲ್ಲಿ ವಾಸವಾಗಿದ್ದ ಮಗ ಷಣ್ಮುಖಪ್ಪ ಅವರಿಗೆ ತಿಳಿಸಲು ಬುಧವಾರ  ಹೋದಾಗ ಆಘಾತದ ಮೇಲೆ ಇನ್ನೊಂದು ಆಘಾತ ಕಾದಿತ್ತು. ಷಣ್ಮುಖಪ್ಪ ಅವರೂ ಮಲಗಿದ್ದ ಹಾಸಿಗೆಯಿಂದ ಎದ್ದೇಳಲೇ ಇಲ್ಲ.

ಜೊತೆಯಾಗಿ ಜಗತ್ತು ತೊರೆದ ತಾಯಿ- ಮಗನ ಶವವನ್ನು ಗ್ರಾಮಸ್ಥರು ಹಾಗೂ ಸಂಬಂಧಿಗಳು ಒಂದೇ ಕಡೆ ಇರಿಸಿ ಪೂಜೆ ಸಲ್ಲಿಸಿ ಒಂದೇ ಕಡೆ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ.

Home add -Advt

ಕಂದಕಕ್ಕೆ ಬಿದ್ದ ಮದುವೆ ದಿಬ್ಬಣದ ಬಸ್;  25 ಮಂದಿ ಸಾವು

 

Related Articles

Back to top button