Kannada NewsLatestNational

*ಪ್ರೇಯಸಿಯಿಂದ ಕೊಲೆಯಾದ 18 ಮಕ್ಕಳ ತಂದೆ*

ಪ್ರಗತಿವಾಹಿನಿ ಸುದ್ದಿ: ಪ್ರೇಯಸಿ ಕೈಯಿಂದಲೇ 18 ಮಕ್ಕಳು ಹಾಗೂ ಎರಡು ಹೆಂಡತಿಯರ ಗಂಡ ಕೊಲೆ ಆಗಿರುವ ಘಟನೆ ಬೆಳಕಿಗೆ ಬಂದಿದೆ.

ಈ ಘಟನೆ ಉತ್ತರ ಪ್ರದೇಶದ ಪ್ರತಾಪ್​ಗಢದಲ್ಲಿ ನಡೆದಿದೆ. ಗುಲ್ಶನ್ ಕೊಲೆಯಾದ ವ್ಯಕ್ತಿ. ವೃತ್ತಿಯಲ್ಲಿ ಇತ ಮಾಜಿ ಸೈನಿಕನಾಗಿದ್ದ, ಕೊಲೆ ಮಾಡಿದ ಆರೋಪಿ ಸುಮನ.‌ ಸುಮನ ಗುಲ್ಶನನ್ನು ಕೊಲೆ ಮಾಡಿ ಅವರ ಶವವನ್ನು ಕಾಲುವೆಯಲ್ಲಿ ಎಸೆದಿದ್ದಳು ಎನ್ನಲಾಗುತ್ತಿದೆ.‌

Home add -Advt

ಈ ಕೊಲೆಯನ್ನು ಮೃತ ವ್ಯಕ್ತಿಯ ಗೆಳತಿ ಸುಮನ್ ಮತ್ತು ಆಕೆಯ ಸಹಚರರು ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ತನಿಖಾಧಿಕಾರಿಗಳ ಪ್ರಕಾರ, ಗುಲ್ಶನ್ ತಲೆಗೆ ರಾಡ್‌ನಿಂದ ಹಲ್ಲೆ ನಡೆಸಲಾಗಿದ್ದು, ಇದು ಅವರ ಸಾವಿಗೆ ಕಾರಣ ಎನ್ನಲಾಗಿದೆ. 

ನಂತರ ಆರೋಪಿಗಳು ಅಪರಾಧವನ್ನು ಮರೆಮಾಚುವ ಪ್ರಯತ್ನದಲ್ಲಿ ಶವವನ್ನು ಚೀಲದಲ್ಲಿ ತುಂಬಿಸಿ ಕಾಲುವೆಗೆ ಎಸೆದಿದ್ದಾರೆ. ಮಾಹಿತಿಯ ಮೇರೆಗೆ ಪೊಲೀಸರು ಶವವನ್ನು ವಶಪಡಿಸಿಕೊಂಡು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

ಮಿಶ್ರಪುರ್ ಮುಸ್ತಾಕ್ ಗ್ರಾಮದ ಮಾಜಿ ಪ್ರಧಾನ ಗುಲ್ಶನ್ ಇಬ್ಬರು ಪತ್ನಿಯರು ಮತ್ತು 18 ಮಕ್ಕಳನ್ನು ಅಗಲಿದ್ದಾರೆ. ಪೊಲೀಸರು ಹೇಳುವ ಪ್ರಕಾರ, ಅವರು ಎರಡು ಬಾರಿ ವಿವಾಹವಾಗಿದ್ದರು ಅವರ ಮೊದಲ ಪತ್ನಿ ಕಿಸ್ಮತುಲ್ ನಿಶಾ ಅವರಿಗೆ ಒಂಬತ್ತು ಮಕ್ಕಳಿದ್ದಾರೆ, ಅವರ ಎರಡನೇ ಪತ್ನಿ ಅಂಬಿಯಾ ಬಾನೋಗೆ ಸಹ ಒಂಬತ್ತು ಮಕ್ಕಳಿದ್ದಾರೆ. ಎರಡೂ ಕುಟುಂಬಗಳು ಒಟ್ಟಿಗೆ ವಾಸಿಸುತ್ತಿದ್ದವು. 

ಸದ್ಯ ಸುಮನ್ ನನ್ನು ಬಂಧಿಸಲಾಗಿದ್ದು, ಈ ಪ್ರಕರಣದಲ್ಲಿ ಭಾಗಿಯಾಗಿರುವ ಇತರ ಆರೋಪಿಗಳನ್ನು ಪತ್ತೆ ಹಚ್ಚಲು ಹೆಚ್ಚಿನ ತನಿಖೆ ನಡೆಯುತ್ತಿದೆ. 

Related Articles

Back to top button