ಪ್ರಗತಿವಾಹಿನಿ ಸುದ್ದಿ; ನವದೆಹಲಿ: ದೇಶಾದ್ಯಂತ ಕೊರೊನಾ ಅಟ್ಟಹಾಸ ಮುಂದುವರೆದಿದೆ. ಕಳೆದ 24 ಗಂಟೆಗಳಲ್ಲಿ ಬರೋಬ್ಬರಿ 3,970 ಜನರಿಗೆ ಸೋಂಕು ಹರಡಿದೆ. ಪರಿಣಾಮ ದೇಶದಲ್ಲಿ ಸೋಂಕಿತರ ಸಂಖ್ಯೆ 85,940ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಹೆಲ್ತ್ ಬುಲೆಟಿನ್ ತಿಳಿಸಿದೆ.
85,940 ಸೋಂಕಿತರ ಪೈಕಿ ಕೇವಲ 30152 ಮಂದಿ ಸಂಪೂರ್ಣ ಗುಣಮುಖರಾಗಿದ್ದಾರೆ. ಈ ಮೂಲಕ ಪ್ರಸ್ತುತ ದೇಶದಲ್ಲಿ 53,035 ಸಕ್ರಿಯ ಪ್ರಕರಣಗಳಿವೆ. ಎಲ್ಲರಿಗೂ ಪ್ರತ್ಯೇಕವಾಗಿ ಚಿಕಿತ್ಸೆ ನೀಡಲಾಗುತ್ತಿದೆ.
ಮಾರಕ ಕೊರೋನಾಗೆ ಕಳೆದ 24 ಗಂಟೆಗಳಲ್ಲಿ 103 ಮಂದಿ ಬಲಿಯಾಗಿದ್ದಾರೆ. ಹಾಗಾಗಿ ಇದುವರೆಗೂ ಸೋಂಕಿಗೆ ಬಲಿಯಾದವರ ಸಂಖ್ಯೆ 2,752 ಏರಿಕೆಯಾಗಿದೆ. ಹೀಗಿರುವಾಗಲೇ ಸದ್ಯದಲ್ಲೇ ಕೊರೋನಾ ಸಮುದಾಯ ಹಂತ ತಲುಪುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ದೇಶದಲ್ಲೀಗ ಕೊರೋನಾ ತೀವ್ರವಾಗಿ ಹರಡುತ್ತಿರುವ ಪರಿಣಾಮ ಮಹಾರಾಷ್ಟ್ರ ಬೆನ್ನಲ್ಲೇ ಇದೀಗ ತಮಿಳುನಾಡು ಭಾರತದ ಕೊರೊನಾ ಹಾಟ್‌ಸ್ಪಾಟ್ ಕೇಂದ್ರವಾಗಿ ಪರಿಣಮಿಸಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ