ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಕೊರೋನಾ ಸಂಕಷ್ಟದ ನಡುವೆ ಈ ವರ್ಷ ಭಾರತ ಹಲವಾರು ಸವಾಲುಗಳನ್ನು ಎದುರಿಸಿದೆ. ಪ್ರಕೃತಿ ವಿಕೋಪಗಳಾದ ಚಂಡಮಾರುತ, ಭೂಕಂಪ, ಮಿಡತೆ ದಾಳಿ ಹೀಗೆ ಹಲವಾರು ಸಂಕಷ್ಟಗಳನ್ನು ಎದುರಿಸಿದೆ. ಕೊರೊನಾ ಸೋಂಕಿನಿಂದಾಗಿ 2020ನೇ ವರ್ಷ ಬೇಗ ಮುಗಿಯುತ್ತಿಲ್ಲ. ಕೆಲವರಿಗೆ ಈ ವರ್ಷ ಇಷ್ಟವಾಗುತ್ತಿದೆ. ಇನ್ನು ಕೆಲವರಿಗೆ ಈ ವರ್ಷ ಕಷ್ಟವಾಗುತ್ತಿಲ್ಲ. ಕೊರೊನಾ ವಿರುದ್ಧದ ಹೋರಾಟ ಸುದೀರ್ಘವಾಗಿ ನಡೆಯುತ್ತದೆ. ಕಷ್ಟಗಳು ಬರುತ್ತವೆ ಆದರೆ ಕಷ್ಟದ ನಡುವೆ ಈ ವರ್ಷ ಕೆಟ್ಟ ವರ್ಷ ಎಂದು ಭಾವಿಸಬಾರದು ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.
ಜನಪ್ರಿಯ ರೇಡಿಯೋ ಕಾರ್ಯಕ್ರಮ ಮನ್ ಕೀ ಬಾತ್ ನಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಕೊರೊನಾ ಮಹಾಮಾರಿಯಿಂದ ಮನುಕುಲಕ್ಕೆ ಸಂಕಷ್ಟ ಎದುರಾಗಿದೆ. ಪ್ರಸಕ್ತ ವರ್ಷ ಪ್ರಕೃತಿ ವಿಕೋಪಗಳು ಸಂಭವಿಸುತ್ತಿವೆ. ಸವಾಲುಗಳನ್ನು ಮೆಟ್ಟಿ ನಾವು ಮುನ್ನಡೆಯಬೇಕು ಎಂದರು.
ಈ ಮಧ್ಯೆ ಮಧ್ಯೆ ನಮ್ಮ ನೆರೆ ದೇಶ ನೀಡುತ್ತಿರುವ ಕಿರುಕುಳ ವಿರುದ್ಧ ಸಹ ಹೋರಾಡಬೇಕಾಗಿದೆ. ಶಾಂತಿ ಕಾಪಾಡುವಲ್ಲಿ ಭಾರತದ ಬದ್ಧತೆ ಮತ್ತು ಶಕ್ತಿಯನ್ನು ಇಡೀ ಪ್ರಪಂಚ ನೋಡಿದೆ. ಲಡಾಖ್ ನಲ್ಲಿ ಭಾರದತ್ತ ಕಣ್ಣೆತ್ತಿ ನೋಡಿದವರಿಗೆ ನಮ್ಮ ಯೋಧರು ತಕ್ಕ ಪ್ರತ್ಯುತ್ತರ ನೀಡಿದ್ದಾರೆ. ಗಡಿ ರಕ್ಷಣೆ ಮಾಡುವಲ್ಲಿ ಸೈನಿಕರ ಸಾಮರ್ಥ್ಯವನ್ನು ನಾವು ನೋಡುತ್ತಿದ್ದೇವೆ. ಶೌರ್ಯ ಮೆರೆದು ಹುತಾತ್ಮರಾದ ಸೈನಿಕರಿಗೆ ದೇಶದ ಜನತೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಇಡೀ ದೇಶವೇ ಹುತಾತ್ಮ ಯೋಧರಿಗೆ ಕೃತಜ್ನರಾಗಿದ್ದಾರೆ.
ಅನ್ ಲಾಕ್ ಸಮಯದಲ್ಲಿ ನಾವು ಕೊರೊನಾವನ್ನು ಸೋಲಿಸಬೇಕಿದೆ. ಮಾಸ್ಕ್ ಧರಿಸಿ, ಸಾಮಾಜಿಕ, ದೈಹಿಕ ಅಂತರ ಕಾಯ್ದುಕೊಳ್ಳುವ ಮೂಲಕ ಸೋಂಕಿನಿಂದ ರಕ್ಷಿಸಿಕೊಳ್ಳಬೇಕು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ