Latest

ಮಗನನ್ನೇ ಕೊಚ್ಚಿ ಕೊಲೆಗೈದ ತಂದೆ

ಪ್ರಗತಿವಾಹಿನಿ ಸುದ್ದಿ; ಚಾಮರಾಜನಗರ: ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಸ್ವಂತ ತಂದೆಯೇ ಮಗನನ್ನು ಕೊಚ್ಚಿ ಕೊಲೆಗೈದ ಧಾರುಣ ಘಟನೆ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಹೊನ್ನೆಗೌಡನಹುಂಡಿಯಲ್ಲಿ ನಡೆದಿದೆ.

ಹೊನ್ನೆಗೌಡನಹುಂಡಿಯ ಮಲ್ಲಿಕಾರ್ಜುನಪ್ಪ ಕೊಲೆಯಾದ ದುರ್ಧೈವಿ. ತಂದೆ ಮಹಾದೇವಪ್ಪ ಹಾಗೂ ಆತನ ಎರಡನೇ ಮಗ ಮಂತ್ರಪ್ಪ ಆರೋಪಿಗಳು.

Home add -Advt

ಆಸ್ತಿ ವಿಚಾರಕ್ಕೆ ತಂದೆ ಮಹಾದೇವಪ್ಪ ಹಾಗೂ ಹಿರಿಯ ಮಗ ಮಲ್ಲಿಕಾರ್ಜುನಪ್ಪ ನಡುವೆ ಕಳೆದ ಎರಡು ವರ್ಷಗಳಿಂದ ಜಗಳ ನಡೆದಿತ್ತು. ಆದರೆ ಮಲ್ಲಿಕಾರ್ಜುನಪ್ಪ ಇಂದು ಬೆಳಗ್ಗೆ ಜಮೀನಿನ ಬಳಿ ಮರ ಕಡಿಯಲು ಹೋಗಿದ್ದ. ಈ ವೇಳೆ ಅಲ್ಲಿಗೆ ಬಂದ ತಂದೆ ಮಹಾದೇವಪ್ಪ ಮಗನ ಜೊತೆಗೆ ಗಲಾಟೆ ಮಾಡಿದ್ದಾನೆ. ಮಾತಿಗೆ ಮಾತು ಬೆಳೆದು ಜಗಳ ವಿಕೋಪಕ್ಕೆ ಹೋಗಿ ಮಹಾದೇವಪ್ಪ ಮಗನ ಮೇಲೆ ಹಲ್ಲೆ ಮಾಡಿ ಕೊಚ್ಚಿ ಕೊಲೆಗೈದಿದ್ದಾನೆ. ಇದಕ್ಕೆ ಆತನ ಎರಡನೇ ಮಗ ಮಂತ್ರಪ್ಪ ಕೂಡ ಸಾಥ್ ನೀಡಿದ್ದ.

ಕೃತ್ಯದ ಬಳಿಕ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದರು. ಗ್ರಾಮಸ್ಥರ ಮಾಹಿತಿ ಮೇರೆಗೆ ಸ್ಥಳಕ್ಕೆ ದೌಡಾಯಿಸಿದ ಗುಂಡ್ಲುಪೇಟೆ ಠಾಣೆ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

Related Articles

Back to top button