Belagavi NewsBelgaum NewsLatestPolitics

*ಬೆಳಗಾವಿಗೆ ಬಿಗ್ ಶಾಕ್!* *ಮನೆ ಖಾಲಿ ಮಾಡಿದ ಸಂಸದ ಜಗದೀಶ್ ಶೆಟ್ಟರ್!!*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಲೋಕಸಭಾ ಚುನಾವಣೆಯಲ್ಲಿ ಗೆದ್ದು ಕೇವಲ ಎರಡೇ ತಿಂಗಳಲ್ಲಿ ಜಗದೀಶ್ ಶೆಟ್ಟರ್ ಬೆಳಗಾವಿಯ ಮನೆ ಖಾಲಿ ಮಾಡಿದ್ದಾರೆ! ತನ್ಮೂಲಕ ಬೆಳಗಾವಿಗೆ ಬಿಗ್ ಶಾಕ್ ನೀಡಿದ್ದಾರೆ.

ಚುನಾವಣೆ ಸಂದರ್ಭದಲ್ಲಿ ಬೆಳಗಾವಿಯ ಅಡ್ರೆಸ್ ತೋರಿಸಲು ಇಲ್ಲಿಯ ಕುಮಾರಸ್ವಾಮಿ ಲೇಔಟ್ ನಲ್ಲಿ ತರಾತುರಿಯಲ್ಲಿ ಬಾಡಿಗೆ ಮನೆ ಮಾಡಿದ್ದ ಶೆಟ್ಟರ್ ಗೆದ್ದ ಕೆಲವೇ ದಿನಗಳಲ್ಲಿ ಮನೆ ಖಾಲಿ ಮಾಡಿದ್ದಾರೆ.

Home add -Advt

ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಜಗದೀಶ್ ಶೆಟ್ಟರ್ ಗೆ ಅಡ್ರೆಸ್ ಎಲ್ಲಿದೆ ಎನ್ನುವ ಟೀಕೆ ವ್ಯಾಪಕವಾಗಿದ್ದ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಬಾಡಿಗೆ ಮನೆ ಮಾಡಿದ್ದ ಸಂಸದ ಜಗದೀಶ್ ಶೆಟ್ಟರ್ ಇದೀಗ ದಿಢೀರನೆ ಮನೆ ಖಾಲಿ ಮಾಡಿದ್ದು, ಹಲವಾರು ಪ್ರಶ್ನೆಗಳಿಗೆ ಎಡೆಮಾಡಿಕೊಟ್ಟಿದೆ. 

ಲೋಕಸಭಾ ಚುನಾವಣೆ ವೇಳೆ ಬೆಳಗಾವಿ ನಗರದ ಕುಮಾರಸ್ವಾಮಿ ಲೇಔಟ್‌ನಲ್ಲಿ ಶೆಟ್ಟರ್ ಬಾಡಿಗೆ ಮನೆಯನ್ನು ಮಾಡಿದ್ದರು. ಈ ವೇಳೆ ಪತ್ನಿ, ಪುತ್ರ ಸೇರಿ ಕುಟುಂಬ ಸಮೇತ ಬೆಳಗಾವಿಗೆ ಜಗದೀಶ್ ಶೆಟ್ಟರ್ ಶಿಫ್ಟ್ ಆಗಿದ್ದರು. ಯುಗಾದಿ ನಂತರದಲ್ಲಿ ಪೂಜೆಯೊಂದಿಗೆ ಮನೆಯನ್ನು ಪ್ರವೇಶಿಸಿದ್ದರು. ಇದೀಗ ದಿಢೀರ್ ಖಾಲಿ ಮಾಡಿದ್ದು, ಶೆಟ್ಟ‌ರ್ ವಾಸವಿದ್ದ ಮನೆಯನ್ನು ಮಾಲೀಕ ಬೇರೆಯವರಿಗೆ ಬಾಡಿಗೆ ನೀಡಿದ್ದಾರೆ.

ಶೆಟ್ಟರ್ ಹೊರಗಿನವರು, ಅವರಿಗೆ ಬೆಳಗಾವಿಯಲ್ಲಿ ಎಲ್ಲಿದೆ ಅಡ್ರೆಸ್ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪ್ರಶ್ನಿಸಿದ್ದರು. ಲೋಕಸಭಾ ಚುನಾವಣೆಯಲ್ಲಿ ಈ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆಯಾಗಿತ್ತು. ತರಾತುರಿಯಲ್ಲಿ ಬಾಡಿಗೆ ಮನೆ ಮಾಡಿದ ಶೆಟ್ಟರ್, ನಾನು ಬೆಳಗಾವಿಯಲ್ಲಿ ಮನೆ ಮಾಡಿದ್ದು, ಖಾಯಂ ವಿಳಾಸ ಇರುವುದಾಗಿ ತಿರುಗೇಟು ಕೊಟ್ಟಿದ್ದರು. ಆದರೆ, ಈಗ ಬಾಡಿಗೆ ಮನೆ ಖಾಲಿ ಮಾಡಿದ್ದು, ಮತ್ತೆ ಅವರ ಅಡ್ರೆಸ್ ಕೇಳುವಂತಾಗಿದೆ.

ಈ ಬಗ್ಗೆ ಮಾತನಾಡಿರುವ ಅವರು ಜಗದೀಶ್ ಶೆಟ್ಟರ್ ಅವರು, ಒಂದು ಖಾಯಂ ಮನೆ ನಿರ್ಮಾಣ ಮಾಡುವ ಉದ್ದೇಶದಿಂದ ಸೈಟ್ ನೋಡುತ್ತಿದ್ದೇನೆ. ಆದಷ್ಟು ಬೇಗನೆ ಸೈಟ್ ಖರೀದಿಸಿ, ಮನೆ ಕಟ್ಟುವ ಕೆಲಸ ಆರಂಭಿಸುತ್ತೇನೆ ಎಂದು ಹೇಳಿದ್ದಾರೆ.‌ ಶೆಟ್ಟರ್ ಅವರ ಈ ಮಾತನ್ನು ನಂಬಬೇಕೇ ಎಂದು ಬೆಳಗಾವಿಯ ಜನರು ಪ್ರಶ್ನಿಸುತ್ತಿದ್ದಾರೆ.

ಈ ಹಿಂದೆ ಬೆಳಗಾವಿಯಿಂದ ಸೌಲಭ್ಯಗಳನ್ನು ಹುಬ್ಬಳ್ಳಿಗೆ ಶಿಫ್ಟ್ ಮಾಡಿದ್ದಾರೆ ಎನ್ನುವ ಆರೋಪ ಜಗದೀಶ ಶೆಟ್ಟರ್ ಮೇಲಿತ್ತು. ಇದೀಗ ಮನೆಯನ್ನೂ…

ಒಟ್ಟಾರೆ, ಬೆಳಗಾವಿ ಜನರ ಕಿವಿಯ ಮೇಲೆ ಶೆಟ್ಟರ್ ದೊಡ್ಡ ಹೂವನ್ನು ಇಟ್ಟರಾ ಎನ್ನುವ ಚರ್ಚಿ ಎಲ್ಲೆಡೆ ನಡೆಯುತ್ತಿದೆ.

ದು

Related Articles

Back to top button