Belagavi NewsBelgaum News

*ನದಿಯಲ್ಲಿ ಕೊಚ್ಚಿಹೋದ ಯುವಕನ ಎಸ್ ಡಿ ಆರ್ ಎಫ್ ತಂಡದಿಂದ ರಕ್ಷಣಾ ಕಾರ್ಯ* 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ತಾಲೂಕಿನ ಅಲತಗಾ ಗ್ರಾಮದ ಬಳಿ ನಿನ್ನೆ ಸಾಯಂಕಾಲ ಕಾಲುವೆಯಲ್ಲಿ ಕೊಚ್ಚಿ ಹೋದ ಯುವಕನ ಶೋಧ ಕಾರ್ಯ‌ವನ್ನು ಎಸ್ ಡಿ ಆರ್ ಎಫ್ ತಂಡದಿಂದ ಆರಂಭಿಸಲಾಗಿದೆ.‌

ಬೆಳಗಾವಿ ತಾಲೂಕಿನ ಅಲತಗಾ ಕ್ರಾಸ್ ಬಳಿ ಎಸ್ ಡಿ ಆರ್ ಎಫ್ ತಂಡದಿಂದ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿದೆ. ಓಂಕಾರ್ ಅರುಣ್ ಪಾಟೀಲ್ (25) ಗಾಗಿ ಮಾರ್ಕಂಡೇಯ ನದಿಯಲ್ಲಿ ಶೋಧ ಕಾರ್ಯ ಆರಂಭಿಸಲಾಗಿದೆ.‌ ನಿನ್ನೆ ರಾತ್ರಿ ಬೈಕ್ ನಲ್ಲಿ ಬರೋ ಸಂದರ್ಭದಲ್ಲಿ ಆಯ ತಪ್ಪಿ ಬಿದ್ದದ್ದ ಇಬ್ಬರು ಯುವಕರ ಪೈಕಿ  ಓರ್ವ ಯುವಕ ಜ್ಯೋತಿನಾಥ್ ಪಾಟೀಲ್ ಬದುಕುಳಿದಿದ್ದ. ಆದರೆ ಓಂಕಾರ್ ಅರುಣ್ ಪಾಟೀಲ್ ನೀರಿನಲ್ಲಿ ಕೊಚ್ಚಿಹೊಗಿದ್ದು, ರಾತ್ರಿಯಿಂದಲೇ ಕಾರ್ಯಾಚರಣೆ ಆರಂಭಿಸಲಾಗಿದೆ. ಕಾಕತಿ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ.‌

Related Articles

Back to top button