
ಪ್ರಗತಿವಾಹಿನಿ ಸುದ್ದಿ: ಪ್ರೀತಿಸಿ ಮದುವೆಯಾಗಿ ಕೇವ ಒಂದು ದಿನದೊಳಗೆ ದಂಪತಿ ವಿಚ್ಛೇದನಕ್ಕೆ ಅರ್ಜಿ ಸಲ್ಲಸಿ ದಂಪತಿ ದೂರಾಗಿರುವ೦ ಘಟನೆ ನಡೆದಿದೆ.
ಮಹಾರಾಷ್ಟ್ರದ ಪುಣೆಯಲ್ಲಿ ಈ ಘಟನೆ ನಡೆದಿದೆ. ಮದುವೆಯ ಬಳಿಕ ಒಂದೇ ದಿನದಲ್ಲಿ ಇಬ್ಬರ ನಡುವೆ ಭಿನ್ನಾಭಿಪ್ರಾಯ ಮೂಡಿತ್ತು. ಇಬ್ಬರು ಜತೆಗಿರಲು ಸಾಧ್ಯವೇ ಇಲ್ಲ ಎನ್ನುವ ನಿರ್ಧಾರಕ್ಕೆ ಬಂದಿದ್ದರು. ಪರಸ್ಪರ ಒಪ್ಪಿಗೆ ನೀಡಿ ಬೇರೆಯಾಗಲು ಒಪ್ಪಿಕೊಂಡ ನಂತರ ವಿಚ್ಛೇದನ ನಡೆಯಿತು.
ವಿಚಿತ್ರವೆಂದರೆ ಇಬ್ಬರೂ ನಾಲ್ಕು ವರ್ಷಗಳಿಂದ ಪರಿಚಿತರು, ಪರಸ್ಪರ ಪ್ರೀತಿಸಿ ಎರಡು ವರ್ಷ ಲಿವ್ ಇನ್ ಸಂಬಂಧದಲ್ಲಿದ್ದರು. ಪ್ರೇಮ ವಿವಾಹವಾಗಿದ್ದರೂ ಎರಡು ಮೂರು ವರ್ಷಗಳಿಂದ ಪರಸ್ಪರ ಪರಿಚಿತರಾಗಿದ್ದರೂ ಮದುವೆಯಾದ 24 ಗಂಟೆಯಲ್ಲೇ ಭಿನಾಭಿಪ್ರಾಯ ಮೂಡಿದೆ. ಪತ್ನಿ ವೃತ್ತಿಯಲ್ಲಿ ವೈದ್ಯೆ, ಗಂಡ ಎಂಜಿನಿಯರ್. ಸೈದ್ಧಾಂತಿಕ ಭಿನ್ನಾಭಿಪ್ರಾಯದಿಂದಾಗಿ ಒಂದೇ ದಿನಕ್ಕೆ ದೂರಾಗಿದ್ದಾರೆ ಎನ್ನಲಾಗಿದೆ.
ಇನ್ನೊಂದು ವಿಚಾರವೆಂದರೆ ಪ್ರೀತಿಸಿ, ಲಿವ್ ಇನ್ ಸಂಬಂಧದಲ್ಲಿದ್ದರೂ ವರ ಮಹಾಶಯ ತಾನು ವೈದ್ಯನಲ್ಲ ಇಂಜಿನಿಯರ್ ಎಂದು ಹೇಳಿರಲಿಲ್ಲ. ಮದುವೆ ದಿನ ವಿಷಯಗೊತ್ತಾಗಿದ್ದೇ ವಿಚ್ಛೇಧನಕ್ಕೆ ಕಾರಣವಾಗಿದೆ. ಯುವತಿ ವೈದ್ಯೆಯಾಗಿದ್ದು, ಆರಂಭದಿಂದಲೂ ಯುವಕ ತಾನು ವೈದ್ಯನೆಂದು ಹೇಳಿಕೊಂಡಿದ್ದ. ಮದೆವೆಯಾದ ಬಳಿಕ ಮದುವೆ ದಿನದಂದೇ ಆತ ವೈದ್ಯನಲ್ಲ ನೇವಿಯಲ್ಲಿ ಇಂಜಿನಿಯರ್ ಎಂದು ಗೊತ್ತಾಗಿದೆ. ಅಲ್ಲದೇ ಕೆಲಸದಿಂದಾಗಿ ಪದೇ ಪದೇ ಐದಾರು ತಿಂಗಳು ಆತ ಮನೆಯಿಂದ ಹೊರಗಿರಬೇಕಾಗುತ್ತದೆ ಎಂಬ ವಿಷಯ ಹಾಗೂ ಇಷ್ಟು ಕಾಲ ತನ್ನಿಂದ ಈ ವಿಚಾರ ಹೇಳಿಲ್ಲ ಎಂಬುದು ಯುವತಿಗೆ ಶಾಕ್ ಆಗಿದೆ. ಮದುವೆಯಾದ ಒಂದೇ ದಿನದಲ್ಲಿ ವಿಚ್ಛೇಧನದ ನಿರ್ಧಾರಕ್ಕೆ ಬಂದ ಜೋಡಿ ಪರಸ್ಪರ ಒಪ್ಪಿಗೆಯ ಮೂಲಕ ತಮ್ಮ ಮದುವೆಯನ್ನು ಕೊನೆಗೊಳಿಸಿದ್ದಾರೆ. ನ್ಯಾಯಾಲಯವು ಸುಪ್ರೀಂ ಕೋರ್ಟ್ ಮಾರ್ಗಸೂಚಿಗಳಿಗೆ ಅನುಗುಣವಾಗಿ ತನ್ನ ನಿರ್ಧಾರವನ್ನು ಪ್ರಕಟಿಸಿದೆ.



