ಪ್ರಗತಿವಾಹಿನಿ ಸುದ್ದಿ, ಹೊಸದಿಲ್ಲಿ: ದೇಶದಲ್ಲಿ ಅತಿ ಹೆಚ್ಚು ಕೋವಿಡ್ ಸಕ್ರಿಯ ಪ್ರಕರಣಗಳು ದಾಖಲಾಗಿರುವ ರಾಜ್ಯಗಳ ವಿವರವನ್ನು ಆರೋಗ್ಯ ಇಲಾಖೆ ಪ್ರಕಟಿಸಿದೆ.
ಈ ಪೈಕಿ ಪಶ್ಚಿಮ ಬಂಗಾಳದಲ್ಲಿ ಅತಿ ಹೆಚ್ಚು ಅಂದರೆ 30,043 ಸಕ್ರಿಯ ಪ್ರಕರಣಗಳಿದ್ದು ಕಳೆದ 24 ಗಂಟೆಗಳಲ್ಲಿ 20,044 ಹೊಸ ಕೇಸುಗಳು ದಾಖಲಾಗಿವೆ.
ಅಂತೆಯೇ ಕೇರಳದಲ್ಲಿ 24,953, ತಮಿಳುನಾಡಿನಲ್ಲಿ 17,487, ಮಹಾರಾಷ್ಟ್ರದಲ್ಲಿ 16,000, ಕರ್ನಾಟಕದಲ್ಲಿ 6,702 ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಕರ್ನಾಟಕ 5ನೇ ಸ್ಥಾನದಲ್ಲಿದೆ.
ಪ್ರಸ್ತುತ ದೇಶದಲ್ಲಿ 1,40,760 ಸಕ್ರಿಯ ಪ್ರಕರಣಗಳಿದ್ದು ಸಾವಿನ ಸಂಖ್ಯೆ 5,25,660ಕ್ಕೆ ಏರಿಕೆಯಾಗಿದೆ.
ಮುಖಾಮುಖಿ ಡಿಕ್ಕಿಯಾದ ಬೈಕ್ ಗಳು; ಮೂವರು ಸ್ಥಳದಲ್ಲೇ ದುರ್ಮರಣ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ