Latest

ಸೆಪ್ಟೆಂಬರ್ ನಿಂದ ಮಕ್ಕಳಿಗೂ ಲಸಿಕೆ -ಪ್ರಿಯಾ ಅಬ್ರಾಹಂ

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಸೆಪ್ಟೆಂಬರ್ ನಿಂದ 2-18 ವರ್ಷದೊಳಗಿನ ಮಕ್ಕಳಿಗೂ ಕೋವಿಡ್ ಲಸಿಕೆ ನೀಡಬಹುದು ಎಂದು ಭಾರತೀಯ ಸಂಶೋಧನಾ ಮಂಡಳಿ (ICMR) ರಾಷ್ಟ್ರೀಯ ವೈರಾಲಜಿ ಸಂಸ್ಥೆ ನಿರ್ದೇಶಕಿ ಪ್ರಿಯಾ ಅಬ್ರಾಹಂ ಹೇಳಿದ್ದಾರೆ.

ಮಕ್ಕಳಿಗೆ ಲಸಿಕೆ ನೀಡುವ ಸಂಬಂಧ ಈಗಾಗಲೇ 2 ಮತ್ತು 3ನೇ ಹಂತದ ಕ್ಲಿನಿಕಲ್ ಪ್ರಯೋಗ ನಡೆಯುತ್ತಿದ್ದು, ಅದು ಸಂಪೂರ್ಣಗೊಂಡ ನಂತರ ಸೆಪ್ಟೆಂಬರ್ ನಿಂದ ಮಕ್ಕಳಿಗೂ ಲಸಿಕೆ ನೀಡಲಾಗುವುದು ಎಂದರು.

ಕಳೆದ ತಿಂಗಳು ಏಮ್ಸ್ ನಿರ್ದೇಶಕ ರಣದೀಪ್ ಗುಲೇರಿಯಾ, ಭಾರತ್ ಬಯೋಟೆಕ್ ನ ಕೋವ್ಯಾಕ್ಸಿನ್ ಲಸಿಕೆ ಮಕ್ಕಳ ಮೇಲೆ ಪ್ರಯೋಗ ಮಾಡಲಾಗುತ್ತಿದೆ. ಸೆಪ್ಟೆಂಬರ್ ವೇಳೆಗೆ ನೀಡಲಾಗುವುದು ಎಂದು ಹೇಳಿದ್ದರು. ಇದೀಗ ಮುಂದಿನ ತಿಂಗಳಿಂದ ಮಕ್ಕಳಿಗೂ ಲಸಿಕೆ ನೀಡುವುದು ಬಹುತೇಕ ಖಚಿತವಾಗಿದೆ.

ಸಂಸದೆ ಸುಮಲತಾ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಎಂದ ಶ್ರೀಕಂಠಯ್ಯ, ಅವರಿಗೆ ಅದೊಂದೇ ಸಮಸ್ಯೆ ಎಂದ ಸುಮಲತಾ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button