Karnataka News

*ಬೆಂಗಳೂರು ಜನರಿಗೆ ಡಬಲ್ ಶಾಕ್*

ಪ್ರಗತಿವಾಹಿನಿ ಸುದ್ದಿ : ಬೆಂಗಳೂರು ಜನರಿಗೆ ಡಬಲ್ ಶಾಕ್ ಆಗಿದೆ. ಮೈಕೊರೆಯುವ ಚಳಿಯ ಜೊತೆಗೆ ಮಳೆರಾಯ ಕೂಡ ಎಂಟ್ರಿ ಕೊಟ್ಟಿದ್ದಾನೆ. ಭಾನುವಾರ ಬೆಳ್ಳಂಬೆಳಗ್ಗೆ ಜಿಟಿ ಜಿಟಿ ಮಳೆ ಸುರಿಯುತ್ತಿದ್ದು, ಜನರ ವೀಕೆಂಡ್ ಮಸ್ತಿಗೆ ವರುಣದೇವ ಬ್ರೇಕ್ ಹಾಕಿದ್ದಾನೆ.

ಬೆಳಗ್ಗೆ 5 ಗಂಟೆಯಿಂದ ನಗರದ ಹಲವು ಭಾಗದಲ್ಲಿ ಮಳೆರಾಯ ಎಂಟ್ರಿಯಾಗಿದ್ದಾನೆ. ಮುಂಜಾನೇ ಎದ್ದು ವಾಕಿಂಗ್ ಹೊರಟವರಿಗೆ, ದಿನ ನಿತ್ಯದ ಕೆಲಸಗಳಿಗೆ ಹೊರಟಿದ್ದ ಜನರಿಗೆ ತೊಂದರೆಯಾಗಿದೆ. ಅಲ್ಲದೇ ವಾಹನ ಸವಾರರು ಮಳೆಯಿಂದಾಗಿ ಪರದಾಡುವಂತಾಗಿದೆ.

Home add -Advt

ಮೆಜೆಸ್ಟಿಕ್‌, ಟೌನ್ ಹಾಲ್, ಕಾರ್ಪೊರೇಷನ್, ರಿಚ್ಯಂಡ್ ಸರ್ಕಲ್, ಶಾಂತಿನಗರ, ಲಾಲ್ ಬಾಬ್, ಅಶೋಕ ಪಿಲ್ಲರ್, ಆಶ್ರಮ, ಹನುಮಂತನಗರ, ಕತ್ರಿಗುಪ್ಪೆ, ಚಾಮರಾಜಪೇಟೆ, ಶ್ರೀನಗರ, ಶಾಂತಿನಗರ, ಕೆಆರ್ ಮಾರುಕಟ್ಟೆ, ಸ್ಯಾಟಲೈಟ್, ವಿಜಯನಗರ ಸೇರಿ ಹಲವು ಭಾಗಗಳಲ್ಲಿ ಮಳೆಯಾಗಿದೆ. ಕಳೆದ ನಾಲ್ಕು ದಿನಗಳ ಹಿಂದೆ ಮಳೆ ಬೀಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿತ್ತು.

Related Articles

Back to top button