Latest

ಸೈಕಲ್ ನಿಂದ ಬಿದ್ದು ವಿದ್ಯಾರ್ಥಿ ಸಾವು

ಪ್ರಗತಿವಾಹಿನಿ ಸುದ್ದಿ; ಹೆಬ್ರಿ: ಸೈಕಲ್ ನಲ್ಲಿ ಶಾಲೆಗೆ ಹೊರಟ ವಿದ್ಯಾರ್ಥಿ ಸೈಕಲ್ ಸ್ಕಿಡ್ ಆಗಿ ಬಿದ್ದು ಮೃತಪಟ್ಟ ಘಟನೆ ಹೆಬ್ರಿಯ ಹರಿಖಂಡಿಗೆ ಕಂಚಿಗುಂಡಿ ರಸ್ತೆಯಲ್ಲಿ ನಡೆದಿದೆ.

8ನೇ ತರಗತಿಯ ಶ್ರೇಯಸ್ (13) ಮೃತ ವಿದ್ಯಾರ್ಥಿ. ಹರಿಖಂಡಿಗೆ ಕಂಚಿಗುಂಡಿಯಿಂದ ಸೈಕಲ್ ನಲ್ಲಿ ಹೋಗುವಾಗ ಈ ದುರಂತ ಸಂಭವಿಸಿದೆ.

ಸೈಕಲ್ ಸ್ಕಿಡ್ ಆಗಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ವಿದ್ಯಾರ್ಥಿಯನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಮಾರ್ಗ ಮಧ್ಯೆಯೇ ವಿದ್ಯಾರ್ಥಿ ಕೊನೆಯುಸಿರೆಳೆದಿದ್ದಾನೆ. ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಪೊಲೀಸ್ ಕಾನ್ಸ್ ಟೇಬಲ್ ಆತ್ಮಹತ್ಯೆ; ಇಬ್ಬರು ಪತ್ರಕರ್ತರು, ಪೊಲೀಸರು ಸೇರಿ 9 ಜನರ ವಿರುದ್ಧ ಎಫ್ ಐ ಆರ್

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button