Latest

ಪೊಲೀಸ್ ಕಾನ್ಸ್ ಟೇಬಲ್ ಆತ್ಮಹತ್ಯೆ; ಇಬ್ಬರು ಪತ್ರಕರ್ತರು, ಪೊಲೀಸರು ಸೇರಿ 9 ಜನರ ವಿರುದ್ಧ ಎಫ್ ಐ ಆರ್

ಪ್ರಗತಿವಾಹಿನಿ ಸುದ್ದಿ; ಗದಗ: ಪೊಲಿಸ್ ಪೇದೆ ಆತ್ಮಹತ್ಯೆ ಪ್ರಕರಣಕ್ಕೆ ಸ್ಫೋಟಕ ತಿರುವು ಸಿಕ್ಕಿದ್ದು, ಬ್ಲ್ಯಾಕ್ ಮೇಲ್ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಇಬ್ಬರು ಪತ್ರಕರ್ತರು, ಪೊಲೀಸರು ಸೇರಿದಂತೆ 9 ಜನರ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.

ಗದಗದ ರಾಜೀವ್ ಗಾಂಧಿ ಪೊಲೀಸ್ ಠಾಣೆಯ ಕಾನ್ಸ್ ಟೇಬಲ್ ಅಜ್ಜನಗೌಡ ಪಾಟೀಲ್ ಎರಡು ದಿನಗಳ ಹಿಂದೆ ಡೆತ್ ನೋಟ್ ಬರೆದಿಟ್ಟು ಲಕ್ಕುಂಡಿ ಗ್ರಾಮದ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು.

Home add -Advt

ಡೆತ್ ನೋಟ್ ನಲ್ಲಿ ತನಗೆ ಇಬ್ಬರು ವರದಿಗಾರರು, ಐದು ಪೊಲೀಸರು ಸೇರಿದಂತೆ ಒಟ್ಟು 9 ಜನರು ಬ್ಲ್ಯಾಕ್ ಮೇಲ್ ಮಾಡಿ ಕಿರುಕುಳ ನೀಡುತ್ತಿದ್ದಾರೆ ಎಂದು ಬರೆದಿಟ್ಟಿದ್ದರು. ಈ ಹಿನ್ನೆಲೆಯಲ್ಲಿ ಇದೀಗ ಜನಪ್ರಿಯ ನ್ಯೂಸ್ ಚಾನಲ್ ವರದಿಗಾರ ಭೀಮನಗೌಡ ಪಾಟೀಲ್, ಪತ್ರಿಕೆ ವರದಿಗಾರ ಗಿರೀಶ್ ಕುಲ್ಕರ್ಣಿ, ಬೆಟಗೇರಿ ಬಡಾವಣೆ ಪೊಲೀಸ್ ಎಎಸ್ ಐ ಪುಟ್ಟಪ್ಪ ಕೌಜಲಗಿ, ಪೊಲೀಸ್ ಪೇದೆಗಳಾದ ಸಿ.ಆರ್.ನಾಯಕರ, ದಾದಾಪೀರ್ ಮಜಲಾಪೂರ, ಶರಣಪ್ಪ ಅಂಗಡಿ, ಅಂದಪ್ಪಾ ಹಂಜಿ ಹಾಗೂ ಡಬ್ಲಿಂಗ್ ಆರೋಪಿಗಳಾದ ವಿಠ್ಠಲ ಹಬೀಬ್, ಗುರುರಾಜ್ ತಳ್ಳಿಹಾಳ ವಿರುದ್ಧ ಎಫ್ ಐ ಆರ್ ದಾಖಲಿಸಲಾಗಿದೆ.
ಬೆಳಗಾವಿ: ಕಾರಾಗೃಹದಿಂದ ಪರಾರಿಯಾದ ವಿಚಾರಣಾಧೀನ ಕೈದಿ

Related Articles

Back to top button