Kannada NewsLatest
ಬೆಳಗಾವಿ: ಕಾರಾಗೃಹದಿಂದ ಪರಾರಿಯಾದ ವಿಚಾರಣಾಧೀನ ಕೈದಿ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಕಾರಾಗೃಹದಿಂದ ವಿಚಾರಣಾಧೀನ ಕೈದಿ ಪರಾರಿಯಾಗಿರುವ ಘಟನೆ ಬೆಳಗಾವಿ ಜಿಲ್ಲೆ ಬೈಲಹೊಂಗಲದಲ್ಲಿ ನಡೆದಿದೆ.
ಬೈಲಹೊಂಗಲ ಕಾರಾಗೃಹದಲ್ಲಿದ್ದ ಕೈದಿ ಖಾದಿರಸಾಬ್ ರಾಜೇಸಾಬ್ (34) ಪರಾರಿಯಾಗಿದ್ದು, ಜೈಲು ಸಿಬ್ಬಂದಿ ಗಮನ ಬೇರೆದೇ ಸೆಳೆದು ಎಸ್ಕೇಪ್ ಆಗಿದ್ದಾನೆ.
ಜೈಲಿನ ಕೀ ಓಪನ್ ಮಾಡಿಕೊಂದು ಸಬ್ ಜೈಲಿನ ಮುಖ್ಯ ದ್ವಾರದಿಂದಲೇ ಆರೋಪಿ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಹೆಚ್ಚುವರಿ ಎಸ್ ಪಿ ಮಾನಿಂಗ ನಂದಗಾವಿ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.
ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




