*ಗನ್ ಹಿಡಿದು ಬಂದ ವ್ಯಕ್ತಿಯಿಂದ ಸಿಎಂಗೆ ಹಾರ: ದಂಗಾದ ಜನರು; ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದೇನು?*
ಪ್ರಗತಿವಾಹಿನಿ ಸುದ್ದಿ: ಲೋಕಸಭಾ ಚುನಾವಣಾ ಅಖಾಡ ರಂಗೇರುತ್ತಿದ್ದು, ಗಣ್ಯಾತಿಗಣ್ಯರು ಅಭ್ಯರ್ಥಿಗಳ ಪರ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಈ ನಡುವೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾರೆಡ್ಡಿ ಪರ ಮತಬೇಟೆಗೆ ತೆರಳಿದ್ದ ವೇಳೆ ಸಿಎಂ ಸಿದ್ದರಾಮಯ್ಯನವರಿಗೆ ಗನ್ ಹಿಡಿದ ವ್ಯಕ್ತಿಯೊಬ್ಬ ಹಾರ ಹಾಕಿರುವುದು ತೀವ್ರ ಚರ್ಚೆಗೆ ಕರಣವಾಗಿದೆ.
ಪ್ಯಾಂಟ್ ಜೇಬ್ ನಲ್ಲಿ ಗನ್ ಇಟ್ಟುಕೊಂಡು ಬಂದಿದ್ದ ವ್ಯಕ್ತಿ ರಿಯಾಜ್ ಎಂಬಾತ ಚುನಾವಣೆ ಪ್ರಚಾರದ ವೇಳೆ ಸಿಎಂ ಸಿದ್ದರಾಮಯ್ಯ ಹಾಗೂ ಅಭ್ಯರ್ಥಿ ಸೌಮ್ಯಾ ರೆಡ್ಡಿ ಇದ್ದ ವಾಹನವನ್ನು ಹತ್ತಿ ಸಿಎಂ ಸಿದ್ದರಾಅಯ್ಯನವರಿಗೆ ಹಾರ ಹಾಕಿದ್ದ. ಆತ ಹಾರ ಹಾಕಲು ಮುಂದಾದ ವೇಳೆ ಆತನ ಸೊಂಟದಲ್ಲಿ ಗನ್ ಇರುವುದು ಕಂಡು ಬಂದಿದೆ. ನೆರೆದಿದ್ದ ಜನರು ದಂಗಾಗಿದ್ದಾರೆ. ಇದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿತ್ತು.
ಈ ಬಗ್ಗೆ ಬಿಜೆಪಿ ಭದ್ರತಾ ವೈಫಲ್ಯ ಎಂದು ಆಕ್ಷೇಪ ವ್ಯಕ್ತಪಡಿಸಿತ್ತು. ಚರ್ಚೆ ತೀವ್ರಗೊಳ್ಳುತ್ತಿದ್ದಂತೆ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿರುವ ಡಿಸಿಎಂ ಡಿ.ಕೆ.ಶಿವಕುಮಾರ್, ಸೆಕ್ಯೂರಿಟಿ ವೈಫಲ್ಯವೂ ಇಲ್ಲ, ಏನೂ ಇಲ್ಲ. ಅವರವರ ಭದ್ರತೆಗಾಗಿ ಗನ್ ಇಟ್ಟುಕೊಂಡಿರುತ್ತಾರೆ. ನನ್ನ ಜೊತೆಗೂ ಗನ್ ಮ್ಯಾನ್ ಗಳಿದ್ದಾರೆ. ವಿಪಕ್ಷಗಳು ಸುಮ್ಮನೇ ಪಬ್ಲಿಸಿಟಿಗಾಗಿ ಏನೇನೋ ಮಾತನಾಡುತ್ತಿದ್ದಾರೆ. ಮಾತನಾಡಬೇಕು ಎಂದರೆ ಏನಾದರೂ ಒಳ್ಳೆಯ ವಿಷಯ ಇದ್ರೆ ಮಾತಾಡಬೇಕು. ಅನಗತ್ಯ ವಿವಾದಗಳನ್ನು ಮಾಡುವುದಲ್ಲ ಎಂದು ಹೇಳಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ