Politics

*ಅಶೋಕಣ್ಣನ ವಿರುದ್ಧದ ಷಡ್ಯಂತ್ರ ಕೇಳಿ ದಿಗ್ಭ್ರಮೆಯಾಗಿದೆ: ಬಿಜೆಪಿ ನಾಯಕರೇ ಉತ್ತರಿಸಬೇಕು ಎಂದ ಡಿಸಿಎಂ*

ಪ್ರಗತಿವಾಹಿನಿ ಸುದ್ದಿ: ಬಿಜೆಪಿ ಶಾಸಕ ಮುನಿರತ್ನ ಪ್ರಕರಣ ಹಾಗೂ ಹೆಚ್ ಐವಿ ಹರಡಿಸುವ ಸಂಚು ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಡಿಸಿಎಂ ಡಿ.ಕೆ.ಶಿವಕುಮಾರ್, ಮುನಿರತ್ನ ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ, ಆದರೆ ಆರ್.ಅಶೋಕ್ ವಿರುದ್ಧದ ಷಡ್ಯಂತ್ರ ಕೇಳಿ ದಿಗ್ಭ್ರಮೆಯಾಗಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ಅಶೋಕಣ್ಣನ ವಿರುದ್ಧದ ಷಡ್ಯಂತ್ರ ನೋಡಿ ದಿಗ್ಭ್ರಮೆಯಾಗಿದೆ. ಪಾಪ ಅಶೋಕಣ್ಣ….ಇಂತಹ ಸಂಚು ನಾನೆಲ್ಲೋ ನೋಡಿರಲಿಲ್ಲ ಎಂದು ಕಾಲೆಳೆದಿದ್ದಾರೆ.

ಮುನಿರತ್ನ ಪ್ರಕರಣದ ಬಗ್ಗೆ ನಾನೇನು ಹೇಳುವುದು? ಈ ಬಗ್ಗೆ ಅಶೋಕಣ್ಣ, ಸಿ.ಟಿ.ರವಿಯಣ್ಣ, ವಿಜಯೇಂದ್ರಣ್ಣ, ಕುಮಾರಣ್ಣ, ಆರೋಗ್ಯ ಅಧಿಕಾರಿಯೂ ಆಗಿರುವ ಮಂಜುನಾಥ್ ಅವರೇ ಉತ್ತರ ಕೊಡಬೇಕು ಎಂದು ಹೇಳಿದ್ದಾರೆ.


Related Articles

Back to top button