
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಎರಡು ಎಕರೆ ಭೂಮಿಯಲ್ಲಿ ಬರೋಬ್ಬರಿ 20 ಅಡಿ ಎತ್ತರದ 240 ಟನ್ ಕಬ್ಬು ಬೆಳೆದು ಬೆಳಗಾವಿಯ ಕಾರದಗಾ ಗ್ರಾಮದ ಪಸಾರೆ ರೈತರು ಹೊಸ ದಾಖಲೆ ಮಾಡಿದ್ದಾರೆ.
ಹನಿ ನೀರಾವರಿ ಯೋಜನೆಯಲ್ಲಿ 10 ಟ್ರಕ್ ಸಗಣಿ ಗೊಬ್ಬರ ಮಿಶ್ರಣ ಮಾಡಿ 5 ಅಡಿ ಸಾಲು ತಯಾರಿಸಿ 1.50 ಅಡಿ ಅಂತರದಲ್ಲಿ ನಾಟಿ ಮಾಡಿದ್ದೆವು ಎಂದು ರೈತ ಲಕ್ಷ್ಮಣ ಪಸಾರೆ ತಿಳಿಸಿದ್ದಾರೆ.
ಡಿಎಪಿ ಪೊಟ್ಯಾಶ್ ಗೊಬ್ಬರ ಬಳಸಿ, ಬೆಳೆಗೆ ಸರಿಯಾದ ಸಮಯದಲ್ಲಿ ಕೀಟನಾಶಕಗಳನ್ನು ಸಿಂಪಡಿಸಿದ್ದರಿಂದ ಉತ್ಪಾದನೆ ಹೆಚ್ಚಿದೆ. ಒಂದು ಕಬ್ಬು 20 ಅಡಿ ಉದ್ದವಿದ್ದು, 4 ಕೆಜಿ ತೂಕವಿದೆ. ಎರಡು ಎಕರೆಗೆ 2 ಲಕ್ಷ ಖರ್ಚು ಮಾಡಲಾಗಿದ್ದು, ಸುಮಾರು 5 ಲಕ್ಷ ರೂ ಲಾಭವಾಗಿದೆ ಎಂದು ತಿಳಿಸಿದರು.