Film & EntertainmentKannada NewsKarnataka NewsLatest
*ಚಿತ್ರಮಂದಿರಗಳಲ್ಲಿ ‘ಡೆವಿಲ್’ ದರ್ಶನ: ರಾಜ್ಯಾದ್ಯಂತ ಬಿಡುಗದೆ*

ಪ್ರಗತಿವಾಹಿನಿ ಸುದ್ದಿ: ಚಾಲೇಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಡೆವಿಲ್ ಸಿನಿಮಾ ರಾಜ್ಯಾದ್ಯಂತ ಬಿಡಿಗಡೆಯಾಗಿದ್ದು, ಥಿಯೇಟರ್ ಗಳಿಗೆ ದರ್ಶನ್ ಅಭಿಮಾನಿಗೌ ಲಗ್ಗೆಯಿಟ್ಟಿದ್ದಾರೆ.
ಇಂದು ರಾಜ್ಯಾದ್ಯಂತ ಡೆವಿಲ್ ಸಿನಿಮಾ ಬಿಡುಗಡೆಯಾಗಿದ್ದು, ವಿವಿಧ ಥಿಯೇಟರ್ ಗಳಲ್ಲಿ ಮುಂಜಾನೆ 6 ಗಂಟೆಯಿಂದಲೇ ಶೋಗಳು ಆರಂಭವಾಗಿವೆ. ಚಿತ್ರಮಂದಿರಗಳಲ್ಲಿ ಅಭಿಮಾನಿಗಳು ಕಿಕ್ಕಿರಿದು ನೆರೆದಿದ್ದಾರೆ. ದರ್ಶನ್ ಪೋಸ್ಟರ್ ಗಳನ್ನು ಹಿಡಿದು, ಡಿ ಬಾಸ್ ಎಂದು ಘೋಷಣೆಗಳನ್ನು ಕೂಗಿ ಸಂಭ್ರಮಿಸಿದ್ದಾರೆ.
ಫಸ್ಟ್ ಡೇ ಫಸ್ಟ್ ಶೋ ಮಾತ್ರವಲ್ಲ ಎಲ್ಲೆಡೆ ಹೌಸ್ ಫುಲ್ ಆಗಿ ಚಿತ್ರ ಪ್ರದರ್ಶನ ಕಾಣುತ್ತಿದೆ. ಬೆಳಿಗ್ಗೆಯೇ ದರ್ಶನ್ ಪತ್ನಿ ವಿಜಯಲಕ್ಷ್ಮೀ, ಪುತ್ರ ವಿನೀತ್, ದರ್ಶನ್ ಆಪ್ತ ಧನ್ವೀರ್ ಸೇರಿದಂತೆ ಹಲವರು ಸಿನಿಮಾ ವೀಕ್ಷಿಸಿದ್ದಾರೆ.
ಅತ್ತ ದರ್ಶನ್ ಕೊಲೆ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿದ್ದರೆ ಇತ್ತ ದರ್ಶನ್ ಅಭಿನಯದ ಡೆವಿಲ್ ಚಿತ್ರ ರಾಜ್ಯಾದ್ಯಂತ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ.




