
ಪ್ರಗತಿವಾಹಿನಿ ಸುದ್ದಿ : ಖಾಲಿ ಇರುವ ಗ್ರಾಮ ಪಂಚಾಯಿತಿಗಳ ಉಪಚುನಾವಣೆಗೆ ಮುಹೂರ್ತ ಫಿಕ್ಸ್ ಆಗಿದ್ದು, ಮೇ ತಿಂಗಳ 11 ಹಾಗೂ 14ರಂದು ಪಂಚಾಯಿತಿ ಎಲೆಕ್ಷನ್ ನಡೆಸಲು ರಾಜ್ಯ ಚುನಾವಣಾ ಆಯೋಗ ನಿರ್ಧರಿಸಿದೆ.
ಈ ಕುರಿತು ಏಪ್ರಿಲ್ 22 ರಂದು ಅಧಿಕೃತವಾಗಿ ಅಧಿಸೂಚನೆ ಹೊರಬೀಳಲಿದೆ. ರಾಜ್ಯ ಚುನಾವಣಾ ಆಯೋಗದ ಪ್ರಕಾರ ರಾಜ್ಯದಲ್ಲಿ ವಿವಿಧ ಕಾರಣಗಳಿಂದ ತೆರವಾಗಿದ್ದ ರಾಜ್ಯದ 222 ಪಂಚಾಯಿತಿಗಳ ಒಟ್ಟು 260 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.
ಚುನಾವಣೆಯ ರೂಪುರೇಷೆ ಹಾಗೂ ಸವಿಸ್ತಾರವಾದ ಮಾಹಿತಿ ಇದೇ ತಿಂಗಳ ಏಪ್ರಿಲ್ 22ರಂದು ಹೊರಬೀಳಲಿದೆ.