
ಪ್ರಗತಿವಾಹಿನಿ ಸುದ್ದಿ: ಮಕರ ಸಂಕ್ರಾಂತಿ ಹಬ್ಬದ ದಿನದಂದೇ ಭೀಕರ ಅಪಘಾತ ಸಂಭವಿದ್ಸಿದ್ದು, ಬೊಲೆರೊ ವಾಹನ ಪಲ್ಟಿಯಾಗಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಸವಳಂಗ ಬಳಿಯ ಚಿನ್ನಿಕಟ್ಟಿಯಲ್ಲಿ ನಡೆದಿದೆ.
ಬೊಲೆರೊ ವಾಹನಕ್ಕೆ ಹಸು ಅಡ್ಡ ಬಂದ ಪರಿಣಾಮ ಬೊಲೆರೊ ಚಾಲಕನ ನಿಯಂತ್ರಣ ಕಳೆದುಕೊಂದು ಪಲ್ಟಿಯಾಗಿ ಬಿದ್ದಿದೆ. ಸ್ಥಳದಲ್ಲೇ ಮೂವರು ಸಾವನ್ನಪ್ಪಿದ್ದಾರೆ. 6 ಜನರು ಗಾಯಗೊಂಡಿದ್ದಾರೆ.
ಅಡಿಕೆಕೊಯ್ಲು ಮುಗಿಸಿಕೊಂಡು ವಾಪಾಸ್ ಆಗುತ್ತಿದ್ದಾಗ ಈ ದುರಂತ ಸಂಭವಿಸಿದೆ. ಮೃತರನ್ನು ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಚಂದನಕೆರೆಯ ನಾಗರಾಜ್ (38), ಗೌತಮ್ (17) ಹಾಗೂ ಮಂಜುನಾಥ್ (45) ಎಂದು ಗುರುತಿಸಲಾಗಿದೆ.
ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ನ್ಯಾಮತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ