Latest

ಈ ಮೂವರಿಗೆ ಎಲ್ಲಿಂದ ಬಂದಿತ್ತು ಗ್ರಹಚಾರ ನೋಡಿ !

ಬೊಲೆರೋ ವಾಹನದ ಟೈರ್ ಬ್ಲಾಸ್ಟ್; ಮೂವರು ಬೈಕ್ ಸವಾರರ ದಾರುಣ ಸಾವು

ಪ್ರಗತಿವಾಹಿನಿ ಸುದ್ದಿ; ದಾವಣಗೆರೆ: ಬೊಲೆರೋ ವಾಹನದ ಟೈರ್ ಬ್ಲಾಸ್ಟ್ ಆಗಿ ಬೈಕ್ ಗೆ ಡಿಕ್ಕಿಹೊಡೆದ ಪರಿಣಾಮ ಮೂವರು ಬೈಕ್ ಸವಾರರು ಸಾವನ್ನಪ್ಪಿರುವ ಘಟನೆ ದಾವಣಗೆರೆ ಜಿಲ್ಲೆಯಲ್ಲಿ ನಡೆದಿದೆ.

ಬೈಕ್ ಸವಾರರಾದ ಅಜ್ಜಯ್ಯ (18) ಮಂಜುನಾಥ್ (17), ದೇವರಾಜ್ (17) ಮೃತರು. ದಾವಣಗೆರೆ ಜಿಲ್ಲೆಯ ಹೊನ್ನೇಭಾಗಿ ಗ್ರಾಮದ ಬಳಿ ಈ ದುರ್ಘಟನೆ ಸಂಭವಿಸಿದೆ.

Home add -Advt

ಬೊಲೆರೋ ವಾಹನದ ಟೈರ್ ಬ್ಲಾಸ್ಟ್ ಆಗಿ ಬೊಲೆರೋ, ಬೈಕ್ ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಮೃತಪಟ್ಟಿದ್ದರೆ, ಇನ್ನೋರ್ವ ಆಸ್ಪತ್ರೆಗೆ ಸಾಗಿಸುವ ವೇಳೆ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾನೆ. ಗಣಪತಿ ಅನುಷ್ಠಾನಕ್ಕೆ ಅನುಮತಿ ಪಡೆಯಲೆಂದು ಚನ್ನಗಿರಿಗೆ ಯುವಕರು ತೆರಳುತ್ತಿದ್ದಾಗ ಈ ದುರಂತ ಸಂಭವಿಸಿದೆ.
ರಾಜ್ಯದಲ್ಲಿ ಹೆಚ್ಚಿದ ಡೆಂಘ್ಯೂ, ಚಿಕುನ್ ಗುನ್ಯ ಪ್ರಕರಣ

Related Articles

Back to top button