*ಬೆಸ್ಕಾಂ ನಿರ್ಲಕ್ಷ್ಯಕ್ಕೆ ಕೈಯನ್ನೇ ಕಳೆದುಕೊಂಡ ಬಾಲಕ; ಮುಂಗೈ ಹಾಗೂ ಕಾಲು ಬೆರಳನ್ನೇ ಕತ್ತರಿಸಿ ತೆಗೆದ ವೈದ್ಯರು*
ಪ್ರಗತಿವಾಹಿನಿ ಸುದ್ದಿ; ಶಿವಮೊಗ್ಗ: ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಇತ್ತೀಚೆಗೆ ಬೆಂಗಳೂರಿನಲ್ಲಿ ತಾಯಿ-ಮಗು ಬಲಿಯಾದ ಘಟನೆ ಕಣ್ಮುಂದೆಯೆ ಇರುವಾಗ ಇದೀಗ ಬಾಲಕನೊಬ್ಬ ಕೈಯನ್ನೇ ಕಳೆದುಕೊಂಡಿರುವ ಘಟನೆ ನಡೆದಿದೆ.
ಆಟವಾಡಲು ಹೋಗಿದ್ದ ಬಾಲಕನೊಬ್ಬ ನೇತು ಬಿದ್ದ ವಿದ್ಯುತ್ ತಂತಿ ತಗುಲಿ ಕೈ ಹಾಗೂ ಕಾಲು ಬೆರಳನ್ನೇ ಕಳೆದುಕೊಂಡಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ. 11 ವರ್ಷದ ವಿಕಲಚೇತನ ಬಾಲಕ ದಿಲಿಪ್ ಎಂಬಾತ ಆಟವಾದುತ್ತಿದ್ದಾಗ ವಿದ್ಯುತ್ ತಂತಿ ತಗುಲಿ ಕರೆಂಟ್ ಶಾಕ್ ಹೊಡೆಸಿಕೊಂಡು ಪ್ರಜ್ಞಾಹೀನ ಸ್ಥಿತಿ ತಲುಪಿದ್ದಾನೆ. ತಕ್ಷಣ ಕುಟುಂಬದವರು ಬಾಲಕನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಾಲಕನ ಜೀವ ರಕ್ಷಿಸಿದ ವೈದ್ಯರು ಆತನ ಕೈ ಹಾಗೂ ಕಾಲು ಬೆರಳನ್ನು ತೆಗೆಯಬೇಕಾದ ಸ್ಥಿತಿಗೆ ಬಂದಿದ್ದಾರೆ.
ಬಾಲಕನ ಕೈ ಹಾಗೂ ಕಾಲು ಬೆರಳುಗಳಿಗೆ ವಿದ್ಯುತ್ ಶಾಕ್ ನಿಂದ ಆದ ಗಾಯ ದಿನದಿಂದ ದಿನಕ್ಕೆ ಹೆಚ್ಚಾಗಿ ಗ್ಯಾಂಗ್ರೀನ್ ರೀತಿ ಆಗಿದೆ. ಬಾಲಕನನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಾಲಕನ ಜೀವ ಉಳಿಸಲು ಬೇರೆ ದಾರಿಯಿಲ್ಲದೇ ಆತನ ಬಲಗೈ ಮುಂಗೈ ಹಾಗೂ ಎಡಗಾಲಿನ ಮೂರು ಬೆರಳನ್ನು ಕತ್ತರಿಸಿ ತೆಗೆದು ಆಪರೇಷನ್ ಮಾಡಿದ್ದಾರೆ.
ಕೈ ಕಳುದುಕೊಂಡ ಬಾಲಕನ ನರಳಾಟ, ಚೀರಾಟ ಕರುಳು ಹಿಂಡುವಂತಿದೆ. ಬೆಸ್ಕಾಂ ಅಧಿಕಾರಿಗಳ ಬೇಜವಾಬ್ದಾರಿ, ನಿರ್ಲಕ್ಷ್ಯದಿಂದಾಗಿ ಅಮಾಯಕ ಬಾಲಕ ತನ್ನ ಕೈ ಹಾಗೂ ಕಾಲಿನ ಮೂರು ಬೆರಳು ಕಳೆದುಕೊಂಡು ಜೀವನ ಪರ್ಯಂತ ನರಳುವಂತಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ