Latest

ಪೆಟ್ರೋಲ್ ಡೀಸೆಲ್ ದರದಲ್ಲಿ ಮತ್ತೆ ಏರಿಕೆ

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಕೊರೊನಾ ಲಾಕ್ ಡೌನ್ ನಡುವೆಯೇ ದೇಶಾದ್ಯಂತ ಪೆಟ್ರೋಲ್-ಡೀಸೆಲ್ ದರದಲ್ಲಿ ಮತ್ತೆ ಏರಿಕೆಯಾಗಿದೆ. ಪೆಟ್ರೋಲ್ ದರ ಲೀಟರ್ ಗೆ 25 ರಿಂದ 26 ಪೈಸೆ ಹಾಗೂ ಡೀಸೆಲ್ ದರ ಲೀಟರ್ ಗೆ 28ರಿಂದ 30 ಪೈಸೆ ಹೆಚ್ಚಳವಾಗಿದೆ.

ಮೇ ತಿಂಗಳಲ್ಲಿ ಈವರೆಗೆ 15 ಬಾರಿ ತೈಲ ಬೆಲೆ ಏರಿಕೆಯಾಗಿದೆ. ಮುಂಬೈನಲ್ಲಿ ಪೆಟ್ರೋಲ್ ದರ ಲೀಟರ್ ಗೆ 100 ರೂ ಗಡಿ ದಾಟಿದ್ದು, 100.19 ರೂಪಾಯಿಯಾಗಿದೆ. ಡೀಸೆಲ್ ದರ 92.17 ರೂಪಾಯಿ ಆಗಿದೆ. ದೆಹಲಿಯಲ್ಲಿ ಪೆಟ್ರೋಲ್ ಲೀಟರ್ ಗೆ 93.94 ರೂಪಾಯಿಯಾಗಿದ್ದು, ಡೀಸೆಲ್ ದರ 84.89ರೂಪಾಯಿಯಾಗಿದೆ.

Home add -Advt

ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ 97.7 ರೂ ಆಗಿದ್ದರೆ ಡೀಸೆಲ್ ದರ 89.99 ರೂಪಾಯಿಯಾಗಿದೆ. ಚೆನ್ನೈ ನಲ್ಲಿ ಪೆಟ್ರೋಲ್-95.51 ರೂಪಾಯಿಯಾಗಿದ್ದರೆ ಡೀಸೆಲ್ ದರ ಲೀಟರ್ ಗೆ 89.65 ರೂ ಆಗಿದೆ.
ಬೆಳಗಾವಿಯಲ್ಲಿ ಇನ್ನಷ್ಠು ಕಠಿಣ ಕ್ರಮ?; 5 ಜಿಲ್ಲೆಗಳ ಜೊತೆ ಸಿಎಂ ಮಹತ್ವದ ಸಭೆ

Related Articles

Back to top button