ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ದಿ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿ ಬೆಳಗಾವಿ ಇದರ ಆಡಳಿತ ಮಂಡಳಿಯಲ್ಲಿ ಆಗಿರುವ ಆಕಸ್ಮಿಕ ಖಾಲಿ ಸ್ಥಾನಕ್ಕೆ ಜರುಗಿದ ಚುನಾವಣೆ ಫಲಿತಾಂಶ ಘೋಷಣೆಯಾಗಿದೆ. ಅಥಣಿ ತಾಲೂಕು ಶೇಗುಣಶಿತ ಸಂಜು ಅಶೋಕ ಅವಕ್ಕನವರ್ ಆಯ್ಕೆಯಾಗಿದ್ದಾರೆ.
ದಿ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿ ಬೆಳಗಾವಿ ಇದರ ಆಡಳಿತ ಮಂಡಲಿಯಲ್ಲಿ ಅಶೋಕ ರಾಚಪ್ಪಾ ಅವಕ್ಕನವರ ಇವರ ನಿಧನದಿಂದ ಆಕಸ್ಮಿಕವಾಗಿ ತೆರವಾದ ನಿರ್ದೇಶಕರ ಸ್ನಾನದ ಚುನಾವಣೆಯಲ್ಲಿ ತಾಲೂಕಾ ಕೃಷಿ ಹುಟ್ಟುವಳಿ ಮಾರಾಟ ಸಹಕಾರ ಸಂಘಗಳ ಮತಕ್ಷೇತ್ರದ ಸ್ಥಾನಕ್ಕೆ ಸ್ಪರ್ಧಿಸಿ ಅವರ ಪುತ್ರ ಸಂಜು ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ರವೀಂದ್ರ ಕರಲಿಂಗಣ್ಣರ್ ಪ್ರಕಟಿಸಿದ್ದಾರೆ.
ಮೂವರು ಕಣದಲ್ಲಿದ್ದು, ಭಾರಿ ಜಿದ್ದಾ ಜಿದ್ದು ಏರ್ಪಟ್ಟಿತ್ತು. ಅಂತಿಮವಾಗಿ ರಮೇಶ ಕತ್ತಿ, ಲಕ್ಷ್ಮಣ ಸವದಿ, ಜೊಲ್ಲೆ ಗುಂಪಿಗೆ ಜಯಲಭಿಸಿತು.
ಬೆಳಗಾವಿಯಲ್ಲಿ ಗುಡುಗು, ಸಿಡಿಲಿನ ಆರ್ಭಟದೊಂದಿಗೆ ಭಯಾನಕವಾಗಿ ಅಬ್ಬರಿಸಿದ ಮಳೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ