Belagavi NewsBelgaum NewsKarnataka News

*ವ್ಯಕ್ತಿ ನಾಪತ್ತೆ: ಪೊಲೀಸ್ ಠಾಣೆಯಲ್ಲಿ ದೂರು ದಾಖಲು*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ ಅನಗೋಳ ಮಾರುತಿಗಲ್ಲಿಯ ಸಾಧಿಕ ಸಲೀಂ ಸರಾಫ್ (41) ಎಂಬಾತ ಮನೆಯಲ್ಲಿ ಯಾರಿಗೂ ಹೇಳದೇ ಮನೆ ಬಿಟ್ಟು ಎಲ್ಲಿಯೋ ಹೋಗಿ ಕಾಣೆಯಾಗಿದ್ದಾನೆ ಎಂದು ತಿಲಕವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಕಾಣೆಯಾದ ವ್ಯಕ್ತಿಯ ವಿವರ: 5.2 ಎತ್ತರ, ಉದ್ದ ಮುಖ, ಗೋದಿಗೆಂಪು ಮೈಬಣ್ಣ, ಮೈಯಿಂದ ಸಧೃಡ ಇದ್ದು, ಬ್ರೌನ್ ಕಲರ್ ಶರ್ಟ, ನೀಲಿ ಬಣ್ಣದ ಜಿನ್ಸ್ ಪ್ಯಾಂಟ್ ಧರಿಸಿರುತ್ತಾನೆ. ಬಲಗೈ ಮೇಲೆ ಹಳೆ ಗಾಯದ ಗುರುತು ಇರುತ್ತದೆ.

ಕಾಣೆಯಾದ ವ್ಯಕ್ತಿಯ ಬಗ್ಗೆ ಮಾಹಿತಿ ಸಿಕ್ಕಲ್ಲಿ ತಿಲಕವಾಡಿಯ ಪೊಲೀಸ್ ಠಾಣೆಯ ದೂರವಾಣಿ ಸಂಖ್ಯೆ: 0831- 2405236, 2405231, 2405255, 9480804112, 9480804052 ಎಂದು ತಿಲಕವಾಡಿ ಪೊಲೀಸ್ ಠಾಣೆಯ ಠಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

Back to top button