*ಈ ಬಗ್ಗೆ ಗೃಹ ಸಚಿವರನ್ನು ಕೇಳಿ: ನಾನು ಎಕ್ಸ್ ಹೋಂ ಮಿನಿಸ್ಟರ್; ಮಾಹಿತಿ ಇಲ್ಲ ಎಂದ ಪರಮೇಶ್ವರ್*

ಟೆಲಿಗ್ರಾಮ್ ಆಪ್ ಮೂಲಕ ಭಯೋತ್ಪಾದಕ ಕೃತ್ಯಕ್ಕೆ ಸಂಚು ಪ್ರಕರಣ
ಪ್ರಗತಿವಾಹಿನಿ ಸುದ್ದಿ: ಚಿಕ್ಕಬಳ್ಳಾಪುರದಲ್ಲಿ ಟೆಲಿಗ್ರಾಮ್ ಆಪ್ ಉಪಯೋಗಿಸಿ ಭಯೋತ್ಪಾದಕ ಕೃತ್ಯ ನಡೆಸಲು ಗ್ರೂಪ್ ಮಾಡಲು ಮುಂದಾಗಿದ್ದರು ಎಂಬ ವಿಚಾರದ ನನಗೆ ಮಾಹಿತಿ ಇಲ್ಲಎಂದು ಡಿಸಿಎಂ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಡಿದ ಪರಮೇಶ್ವರ್, ಈ ವಿಚಾರದ ಬಗ್ಗೆ ಗೃಹ ಸಚಿವರನ್ನು ಕೇಳಿ. ನಾನು ಈಗ ಎಕ್ಸ್ ಗೃಹ ಸಚಿವ ಆಗಿರೋದ್ರೀಂದ ನನಗೆ ಮಾಹಿತಿ ಕೊಡಲ್ಲ. ಹೀಗಾಗಿ ಈ ಬಗ್ಗೆ ಮಾಹಿತಿ ನನಗೆ ಇಲ್ಲ. ಆಗ ಗೃಹ ಸಚಿವ ಇದ್ದೆ ಮಾಹಿತಿ ಕೊಡುತ್ತಿದ್ರು. ಈಗ ಆ ಗೃಹ ಸಚಿವರಿಗೆ ಮಾಹಿತಿ ಕೊಡ್ತಾರೆ ಎಂದು ಹೇಳಿದರು.
ದೇಶದಲ್ಲಿ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದ ಪ್ರಕರಣದಲ್ಲಿ ಮಾಸ್ಟರ್ ಮೈಂಡ್ ಶಬ್ಬೀರ್ ಎಂಬಾತನನ್ನು ಪೊಲೀಸರು ಚಿಕ್ಕಬಳ್ಳಾಪುರದಲ್ಲಿ ಬಂಧಿಸಿದ್ದಾರೆ. ಈತನ ಇನ್‌ಸ್ಟಾಗ್ರಾಮ್ ನಲ್ಲಿ ಉಗ್ರರ ಪೋಸ್ಟ್‌ಗಳಿಗೆ ಲೈಕ್ ಮತ್ತು ಕಾಮೆಂಟ್ ಮಾಡಿ ಬೆಂಬಲಿಸುತ್ತಿದ್ದ. ಇದರಿಂದ ಅನುಮಾನಗೊಂಡಿದ್ದ ಗುಪ್ತಚರ ಇಲಾಖೆ, ಶಬ್ಬೀರ್ ಇನ್‌ಸ್ಟಾ ಐಡಿ ಫಾಲೂ ಮಾಡಿ ಸದ್ದಿಲ್ಲದೇ ತನಿಖೆ ನಡೆಸೋದಕ್ಕೆ ಶುರು ಮಾಡಿತ್ತು. ಈ ಬಗ್ಗೆ ಚಿಕ್ಕಬಳ್ಳಾಪುರ ನಗರ ಪೊಲೀಸರಿಗೆ ಮಾಹಿತಿ ಕೂಡ ನೀಡಲಾಗಿತ್ತು.
ರಾಜ್ಯ ಗುಪ್ತಚರ ಇಲಾಖೆ ಮಾಹಿತಿ ಮೇರೆಗೆ ಶಬ್ಬೀರ್ ಬಂಧನಕ್ಕೆ ಪೊಲೀಸರು ಪ್ಲ್ಯಾನ್ ಮಾಡಿಕೊಂಡಿದ್ದರು. ಅದರಂತೆ ಚಿಕ್ಕಬಳ್ಳಾಪುರ ನಗರ ಪೊಲೀಸರು ಶಬ್ಬೀರ್‌ನನ್ನ ಬಂಧನ ಮಾಡಿ ಮೊಬೈಲ್ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಅಲ್ಲದೇ ಮೊಬೈಲ್ ಪರಿಶೀಲನೆ ವೇಳೆ ಇನ್‌ಸ್ಟಾ, ಟೆಲಿಗ್ರಾಂ ಆಪ್‌ಗಳನ್ನೂ ಪರಿಶೀಲನೆ ಮಾಡಿದ್ದಾರೆ. ಈ ವೇಳೆ ಬೆಬ್ಬಿಬೀಳುವ ಮಾಹಿತಿಗಳು ಲಭ್ಯವಾಗಿವೆ. ಭಯೋತ್ಪಾದನೆಗೆ ಪಿತೂರಿ ನಡೆಸಿರುವುದು ಬಯಲಿಗೆ ಬಂದಿದೆ.




