![](https://pragativahini.com/wp-content/uploads/2024/02/bjp-workers-.jpg)
ಪ್ರಗತಿವಾಹಿನಿ ಸುದ್ದಿ: ದೆಹಲಿಯಲ್ಲಿ ಆಪ್ ಪಕ್ಷವನ್ನು ಬಗ್ಗು ಬಡಿದು ಗೆಲುವು ದಾಖಲಿಸಿದ ಕೇಸರಿಪಡೆ ಸದ್ಯ ಸರ್ಕಾರ ರಚನೆಯತ್ತ ಕಸರತ್ತು ಆರಂಭಿಸಿದೆ. ಬಹುತೇಕ ಒಂದೆರೆಡು ದಿನಗಳಲ್ಲಿ ದೆಹಲಿ ಸಿಎಂ ಆಯ್ಕೆಯಾಗುವ ಸಾಧ್ಯತೆ ಇದೆ.
ಸಿಎಂ ಸ್ಥಾನಕ್ಕೆ ಯಾರು ಆಯ್ಕೆಯಾಗುತ್ತಾರೆ ಎಂಬುದೇ ದೊಡ್ಡ ಕುತೂಹಲಕ್ಕೆ ಕಾರಣವಾಗಿದೆ. ಮೂರು ಬಾರಿ ಸತತವಾಗಿ ಗೆದ್ದಿರುವ ವಿಜೇಂದರ್ ಗುಪ್ತಾ ಹಾಗೂ ಪರ್ವೇಶ್ ವರ್ಮಾ ನಡುವೆ ಸಿಎಂ ಸ್ಥಾನಕ್ಕೆ ಸ್ಪರ್ಧೆ ಉದ್ಭವಿಸಬಹುದು ಎನ್ನಲಾಗುತ್ತಿದೆ.
ಕರೋಲ್ ಬಾಗ್ ನಿಂದ ಗೆದ್ದಿರುವ ದುಷ್ಯಂತ ಗೌತಮ್ ಬಿಜೆಪಿಯ ಹಿರಿಯ ದಲಿತ ನಾಯಕ. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ತಳಮಟ್ಟದಿಂದ ಬೆಳೆದು ಬಂದ ಈ ನಾಯಕನೂ ಸಿಎಂ ರೇಸ್ ನಲ್ಲಿದ್ದಾರೆ.
ಸಿಎಂ ಅಭ್ಯರ್ಥಿ ಆಯ್ಕೆಗೆ ಬಿಜೆಪಿ ಹೈ ಕಮಾಂಡ್ ನಿರ್ಧಾರ ಸಾಕಷ್ಟು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. ವಿಧಾನ ಸಭೆಯಲ್ಲಿಲ್ಲದವರಲ್ಲಿ ಮಾಜಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಮತ್ತು ದಿವಂಗತ ಸುಷ್ಮಾ ಸ್ವರಾಜ್ ಪುತ್ರಿ ಹಾಲಿ ಸಂಸದೆ ಬಾಂಸುರಿ ಸ್ವರಾಜ್ ಅವರ ಹೆಸರೂ ಕೇಳಿಬರುತ್ತಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ