![](https://pragativahini.com/wp-content/uploads/2025/02/IMG_20250208_092545_650_x_350_pixel.jpg)
ಪ್ರಗತಿವಾಹಿನಿ ಸುದ್ದಿ : ರಾಷ್ಟ್ರ ರಾಜಧಾನಿ ದೆಹಲಿಯ ಚುನಾವಣಾ ಫಲಿತಾಂಶವು ಇಂದು ಹೊರಬೀಳಲಿದ್ದು, ಅಂಚೆ ಮತಗಳ ಎಣಿಕೆಯ ಬಳಿಕ ಬ್ಯಾಲೆಟ್ ಎಣಿಕೆ ಪ್ರಾರಂಭವಾಗಿದ್ದು, ಬಿಜೆಪಿ ಆರಂಭಿಕ ಮುನ್ನಡೆ ಸಾಧಿಸಿದೆ.
ಒಟ್ಟು ಎಪ್ಪತ್ತು ಕ್ಷೇತ್ರಗಳ ಮತ ಎಣಿಕೆ ಕಾರ್ಯ ನಡೆಯುತ್ತಿದ್ದು, 42 ಕ್ಷೇತ್ರಗಳಲ್ಲಿ ಬಿಜೆಪಿ, 26 ಕ್ಷೇತ್ರಗಳಲ್ಲಿ ಆಮ್ ಆದ್ಮ ಪಕ್ಷ ಹಾಗೂ ಒಂದು ಕ್ಷೇತ್ರದಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ.
ಆರಂಭಿಕ ಎಣಿಕೆಯಲ್ಲಿ ಮಾಜಿ ಸಿಎಂ ಕೇಜ್ರವಾಲ್, ಸಿಎಂ ಅತಿಶಿ ಮರ್ಲೆನಾ ಹಾಗೂ ಮಾಜಿ ಸಚಿವ ಮನಿಶ್ ಸಿಸೋಡಿಯಾಗೆ ಶಾಕ್ ಎದುರಾಗಿದೆ. ಆದರೆ ಈ ಅಂಕೆಗಳು ಕೆಲವೇ ಸುತ್ತುಗಳಲ್ಲಿ ಮಾರ್ಪಾಡಾಗುವ ನಿರೀಕ್ಷೆಯೂ ಇದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ