Latest

ಹಿಂಸಾಚಾರ ಬೆನ್ನಲ್ಲೇ ಪ್ರತಿಭಟನೆಯಿಂದ ಹಿಂದೆ ಸರಿಯುತ್ತಿವೆ ರೈತ ಸಂಘಟನೆಗಳು

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ದೆಹಲಿ ಹಿಂಸಾಚಾರ ಬೆನ್ನಲ್ಲೇ ರೈತ ಸಂಘಟನೆಗಳಲ್ಲಿ ಒಡಕು ಮೂಡಿದ್ದು, ಒಂದೊಂದೇ ಸಂಘಟನೆಗಳು ಪ್ರತಿಭಟನೆಯಿಂದ ಹಿಂದೆ ಸರಿಯುತ್ತಿವೆ. ಆಲ್ ಇಂಡಿಯಾ ಕಿಸಾನ್ ಸಂಘರ್ಷ ಕೋ ಆರ್ಡಿನೇಷನ್ ಕಮಿಟಿ ರೈತರ ಪ್ರತಿಭಟನೆಯಿಂದ ಹೊರ ಬಂದ ಬೆನ್ನಲ್ಲೇ ಇದೀಗ ಭಾರತೀಯ ಕಿಸಾನ್ ಯೂನಿಯನ್ (ಬಾನು) ಪ್ರತಿಭಟನೆಗೆ ಬೆಂಬಲ ವಾಪಸ್ ಪಡೆದುಕೊಂಡಿದೆ.

ಭಾರತೀಯ ಕಿಸಾನ್ ಯೂನಿಯನ್ ಮುಖಂಡ ಬಾನು ಪ್ರತಾಪ್ ಸಿಂಗ್ ಈ ಕುರಿತು ಮಾಹಿತಿ ನೀಡಿದ್ದು,  ನಿನ್ನೆ ಘಟನೆಯಿಂದ ನಮಗೆ ತುಂಬಾ ನೋವಾಗಿದೆ. ನಾವು ಕಳೆದ 58 ದಿನಗಳಿಂದ ಚಿಲ್ಲಾ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದೆವು ಆದರೆ ಇಂದು ನಾವು ಪ್ರತಿಭಟನೆ ವಾಪಸ್ ಪಡೆದುಕೊಂಡಿದ್ದೇವೆ ಎಂದು ಘೋಷಿಸಿದ್ದಾರೆ.

ಇನ್ನು ಆಲ್ ಇಂಡಿಯಾ ಕಿಸಾನ್ ಸಂಘರ್ಷ ಕೋ ಆರ್ಡಿನೇಷನ್ ಕಮಿಟಿ ಕೂಡ ಕೃಷಿ ಕಾಯ್ದೆ ವಿರುದ್ಧದ ಪ್ರತಿಭಟನೆಯಿಂದ ಹಿಂದೆ ಸರಿದಿದ್ದು, ಬೇರೆಯವರ ನಿರ್ದೇಶನದಂತೆ ನಾವು ಪ್ರತಿಭಟನೆ ಮುಂದುವರೆಸಲ್ಲ. ಈ ಕ್ಷಣದಿಂದ ವಿ.ಎಂ ಸಿಂಗ್ ಮತ್ತು ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿ ಪ್ರತಿಭಟನೆಯಿಂದ ಹಿಂದೆ ಸರಿಯುತ್ತಿದೆ ಎಂದು ಹೇಳಿದ್ದಾರೆ.

Home add -Advt

Related Articles

Back to top button