Latest

ವಾಣಿಜ್ಯ ಕಟ್ಟಡದಲ್ಲಿ ಬೆಂಕಿ ಅವಘಡ; 27 ಜನ ಸಜೀವದಹನ

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ದೆಹಲಿಯ ವಾಣಿಜ್ಯಕಟ್ಟಡದಲ್ಲಿ ಸಂಭವಿಸಿದ ಬೆಂಕಿ ದುರಂತದಲ್ಲಿ 27 ಜನರು ಸಜೀವದಹನಗೊಂಡಿದ್ದಾರೆ. ಮೃತರ ಗುರು ಪತ್ತೆಯಾಗದಷ್ಟು ಸುಟ್ಟುಕರಕಲಾಗಿವೆ.

ಬೆಂಕಿಯಿಂದ ತಪ್ಪಿಸಿಕೊಳ್ಳಲು ಕೆಲವರು ಕಟ್ಟಡದ ಕಿಡಿಕಿಗಳಿಂದ ಕೆಳಗೆ ಹಾರಿದ್ದಾರೆ. ಇನ್ನು ಕೆಲವರನ್ನು ಅಗ್ನಿಶಾಮಕ ಸಿಬ್ಬಂದಿಗಳು ರಕ್ಷಿಸಿವೆ. ಕಟ್ಟಡದಲ್ಲಿ ಪ್ಲಾಸ್ಟಿಕ್ ವಸ್ತುಗಳು ಹೆಚ್ಚಿದ್ದರಿಂದ ಕ್ಷಣ ಕ್ಷಣಕ್ಕೂ ಕಟ್ಟಡದ ತುಂಬೆಲ್ಲ ಬೆಂಕಿ ಕೆನ್ನಾಲಿಗೆ ವ್ಯಾಪಿಸಿದೆ.

Home add -Advt

ಪಶ್ಚಿಮ ದೆಹಲಿಯ ಮುಂಡ್ಕಾ ಮೆಟ್ರೋ ನಿಲ್ದಾಣದ ಸಮೀಪವಿರುವ ಸಿಸಿಟಿವಿ ಉತ್ಪಾದಿಸುವ ಮೂರು ಅಂತಸ್ತಿನ ಕಟ್ಟಡದಲ್ಲಿ ನಿನ್ನೆ ಸಂಜೆ ಅಗ್ನಿ ಅವಘಡ ಸಂಭವಿಸಿದೆ. ವಾಣಿಜ್ಯ ಕಟ್ಟಡವಾಗಿರುವುದರಿಂದ ಕಟ್ಟಡದ ಒಳಗೆ ನೂರಕ್ಕು ಹೆಚ್ಚು ಜನರಿದ್ದರು. 26 ಜನರು ಸಜೀವದಹನಗೊಂಡಿದ್ದರೆ 12ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಕಟ್ಟಡದ ಮಾಲೀಕನ ಬಂಧನಕ್ಕಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

Related Articles

Back to top button