Latest

ಹೊಸ ಸ್ಕೂಟರ್ ಗೆ SEX ನಂಬರ್; ಮುಜುಗರಕ್ಕೀಡಾದ ಯುವತಿ

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ವಾಹನಗಳ ಮೇಲಿನ ನಂಬರ್ ಪ್ಲೇಟ್ ನ ಅಕ್ಷರಗಳು, ಸಂಖ್ಯೆಗಳು ಕೆಲವೊಮ್ಮೆ ಎಂಥಹ ಫಜೀತಿ ತಂದೊಡ್ದುತ್ತದೆ ಎಂಬುದಕ್ಕೆ ಈ ಘಟನೆ ಸಾಕ್ಷಿ.

ಯುವತಿಯೊಬ್ಬರು ಖರೀದಿಸಿದ ಹೊಸ ಬೈಕ್ ಗೆ ಎಸ್ ಇ ಎಕ್ಸ್ ಎಂಬ ಅಕ್ಷರ ಸರಣಿಯ ನಂಬರ್ ದೊರೆತಿದ್ದು, ಯುವತಿ ಸ್ಕೂಟರ್ ಹೊರ ತೆಗೆಯಲು ಮುಜುಗರಕ್ಕೀಡಾದ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ.

ಫ್ಯಾಷನ್ ಡಿಸೈನಿಂಗ್ ಓದುತ್ತಿದ್ದ ಯುವತಿಗೆ ದೀಪಾವಳಿ ಹಬ್ಬದಂದು ಆಕೆಯ ಅಪ್ಪ ಹೊಸ ಬೈಕ್ ಕೊಡಿಸಿದ್ದಾರೆ. ಬೈಕ್ ನೋಂದಣಿ ಪ್ರಕ್ರಿಯೆ ಬಳಿಕ ನಂಬರ್ ನೋಡಿ ಯುವತಿ ಶಾಕ್ ಆಗಿದ್ದಾಳೆ. DLE SEX ಸರಣಿಯ ನಂಬರ್ ಸಿಕ್ಕಿದೆ. ಮೊದಲಿಗೆ ಇದನ್ನು ಗಮನಿಸದ ಯುವತಿ ಹೊಸ ಸ್ಕೂಟರ್ ಹತ್ತಿ ಹೊರಗೆ ಹೋದಾಗ ಜನರು ಬೈಕ್ ನಂಬರ್ ನೋಡಿ ಲೇವಡಿ ಮಾಡಿದ್ದಾರೆ. ಆಗ  ಬೈಕ್ ನಲ್ಲಿರುವ ಅಕ್ಷರ ಆಕೆಯ ಗಮನಕ್ಕೆ ಬಂದಿದೆ. ಮುಜುಗರಕ್ಕೀಡಾದ ಯುವತಿ ಆರ್ ಟಿ ಒ ಅಧಿಕಾರಿಗಳಿಗೆ ಬೈಕಿನ ಅಕ್ಷರ ಶ್ರೇಣಿ ಬದಲಿಸಿಕೊಡುವಂತೆ ಮನವಿ ಮಾಡಿದ್ದಾಳೆ.

ದೆಹಲಿಯಲ್ಲಿ ಮೂರು ಅಕ್ಷರಗಳ ಸರಣಿ ಇರುವುದರಿಂದ ಯಾವುದೇ ದ್ವಿಚಕ್ರವಾಹನಕ್ಕೆ ಒಮ್ಮೆ ನೀಡಿದ ಅಕ್ಷರ ಸರಣಿಯನ್ನು ಮತ್ತೆ ಬದಲಾಯಿಸಲು ಆಗುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈಗ ಯುವತಿ ಏನು ಮಾಡಬೇಕೆಂದು ತೋಚದೆ ಕುಳಿತಿದ್ದಾಳೆ.

ಕೋವಿಡ್ ಟೆಸ್ಟ್, ಕ್ವಾರಂಟೈನ್ ಕಡ್ಡಾಯ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button