ದೋಸೆ ಫ್ರೈ ಮಸಾಲಾ
ಇದು ಸಹನಾಸ್ ಕಿಚನ್ ನ ಎಕ್ಸಕ್ಲೂಸಿವ್ ಸ್ನಾಕ್ಸ. ತಿಳುವಾದ ದೋಸೆಯನ್ನು ಎಣ್ಣೆಯಲ್ಲಿ ಕರಿದು ಮಸಾಲೆಯನ್ನು ಸೇರಿಸಿ ಸಂಜೆಯ ಚಹಾದೊಂದಿಗೆ ಸೇವಿಸಲು ಅತಿ ರುಚಿಯಾದ ತಿನಿಸು ಇದು.
ಬೇಕಾದ ಸಾಮಗ್ರಿಗಳು:
ಸೇವು, ಸಿಹಿ ಚಟ್ನಿ, ಬಾಜಿ, ಚಿಕ್ಕದಾಗಿ ಹೆಚ್ಚಿದ ಈರುಳ್ಳಿ 1, ಕರಿಯಲು ದೋಸೆ 4-5 , ಕತ್ತರಿಸಿದ ಲಿಂಬು 1
ಮಾಡುವ ವಿಧಾನ:
ಕಾದ ಎಣ್ಣೆಯಲ್ಲಿ ತಿಳುವಾದ ದೋಸೆಯನ್ನು ತುಂಡುಗಳನ್ನಾಗಿ ಮಾಡಿ ಕರಿಯ ಬೇಕು. ಪುರಿ ತರ ಗರಿ ಗರಿಯಾಗಿ ಬರುತ್ತದೆ. ಕರಿದ ದೋಸೆ ಚೂರುಗಳನ್ನು ಒಂದು ಬೌಲಿಗೆ ಹಾಕಿ. ಇದರಮೇಲೆ ಹೆಚ್ಚಿಟ್ಟ ಈರುಳ್ಳಿ ಸಿಹಿಚಟ್ನಿ ಹಾಕಬೇಕು. ಹಾಗೆ ಬಾಜಿಯನ್ನು ಹಾಕಬೇಕು. ಶೇವನ್ನು ಹಾಕಿ ಮೇಲೆ ಲಿಂಬು ರಸವನ್ನು ಹಾಕಬೇಕು. ರುಚಿಕರವಾದ ದೋಸೆ ಫ್ರೈ ಮಸಾಲಾ ಸವಿಯಲು ರೆಡಿ.
ಸಿಹಿಚಟ್ನಿ ಮಾಡುವ ವಿಧಾನ:
ಸ್ವಲ್ಪ ಹುಣಸೆಹಣ್ಣು, 5-6 ಖರ್ಜೂರ ಸ್ವಲ್ಪ ಬೆಲ್ಲ, ರುಚಿಗೆ ಉಪ್ಪು, ಅರ್ಧ ಚಮಚ ಮೆಣಸಿನ ಪುಡಿ. ಇವಗಳೆಲ್ಲವನ್ನು ಸೇರಿಸಿ ಸ್ವಲ್ಪ ನೀರು ಹಾಕಿ ಬೇಯಿಸಬೇಕು. ತಣ್ಣಗಾದ ಮೇಲೆ ಮಿಕ್ಸಿಮಾಡಿದರೆ ಸಿಹಿಚಟ್ನಿ ರೆಡಿ.
-ಸಹನಾ ಭಟ್
ಸಹನಾಸ್ ಕಿಚನ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ