Kannada NewsKarnataka NewsNationalPolitics

*ಕ್ಷೇತ್ರಗಳ ಪುನರ್ವಿಂಗಡಣೆ: ಇದು ದಕ್ಷಿಣ ರಾಜ್ಯಗಳ ವಿರುದ್ಧ ರಾಜಕೀಯ ಮರು ವಿನ್ಯಾಸ: ಡಿಸಿಎಂ ಡಿ.ಕೆ.ಶಿವಕುಮಾರ್ ಆಕ್ರೋಶ*

ಪ್ರಗತಿವಾಹಿನಿ ಸುದ್ದಿ: ಕೇಂದ್ರ ಸರ್ಕಾರದ ಪ್ರಸ್ತಾವಿತ ಲೋಕಸಭಾ ಕ್ಷೇತ್ರಗಳ ಪುನರ್ವಿಂಗಡಣೆಯನ್ನು ಡಿಸಿಎಂ ಡಿ.ಕೆ.ಶಿವಕುಮಾರ್ ವಿರೋಧಿಸಿದ್ದು, ಇದು ದಕ್ಷಿಣ ರಾಜ್ಯಗಳ ವಿರುದ್ಧ ಹಾಗೂ ಪಕ್ಷಪಾತದಿಂದ ಕೂಡಿದೆ ಎಂದು ತೀವ್ರವಾಗಿ ಖಂಡಿಸಿದ್ದಾರೆ.

ಕ್ಷೇತ್ರ ಪುನರ್ವಿಂಗಡಣೆ ಡಿಲಿಮಿಟೇಷನ್ ಅಲ್ಲ, ಇದು ದಕ್ಷಿಣ ರಾಜ್ಯಗಳ ವೆಚ್ಚದಲ್ಲಿ ನಡೆಯುತ್ತಿರುವ ರಾಜಕೀಯ ಮರು-ವಿನ್ಯಾಸ. ಲೋಕಸಭೆಯ ಸೀಟುಗಳನ್ನು 543 ರಿಂದ 850ಕ್ಕೆ ಹೆಚ್ಚಿಸುವ ಪ್ರಸ್ತಾಪವು ದಕ್ಷಿಣದ ಧ್ವನಿಯನ್ನು ಕ್ರಮೇಣ ಕಡಿಮೆ ಮಾಡುವ ಮತ್ತು ಬೇರೆಡೆಗಳಲ್ಲಿ ಅನಿಯಂತ್ರಿತ ಜನಸಂಖ್ಯಾ ಬೆಳವಣಿಗೆಗೆ ಬಹುಮಾನ ನೀಡುವ ಯೋಜನೆ ಆಗಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ಪ್ರಗತಿ ಮತ್ತು ಉತ್ತಮ ಆಡಳಿತವನ್ನು ಕುಂಟಿತಗೊಳಿಸುತ್ತದೆ ಎಂದು ಅವರು ಹೇಳಿದ್ದಾರೆ.

Home add -Advt

ಮಹಿಳಾ ಮೀಸಲಾತಿಗೆ ಕಾಂಗ್ರೆಸ್ ಪೂರ್ಣ ಬೆಂಬಲ ನೀಡುತ್ತದೆ. ಇದು ಸೋನಿಯಾ ಗಾಂಧಿಯವರ ದೂರದೃಷ್ಟಿ. ಆದರೆ, ಇದನ್ನು ಡಿಲಿಮಿಟೇಷನ್ ಅಥವಾ ಸೀಟು ಹೆಚ್ಚಳಕ್ಕೆ ಲಿಂಕ್ ಮಾಡದೇ ಜಾರಿಗೊಳಿಸಬೇಕು. ದಕ್ಷಿಣ ರಾಜ್ಯಗಳ ಧ್ವನಿಯನ್ನು ರಾಜಕೀಯವಾಗಿ ಅಂಚಿನಲ್ಲಿಡುವ ಯತ್ನವನ್ನು ನಾವು ಸಹಿಸುವುದಿಲ್ಲ. ದಕ್ಷಿಣ ರಾಜ್ಯಗಳು ಒಗ್ಗಟ್ಟಿನಿಂದ ಮಾತನಾಡುತ್ತವೆ ಮತ್ತು ನಿಜವಾದ ಏಕತೆಯನ್ನು ರಕ್ಷಿಸುತ್ತವೆ ಎಂದು ಹೇಳಿದ್ದಾರೆ.


Related Articles

Back to top button