Latest

ರಾಜ್ಯಕ್ಕೆ ಕಾಲಿಟ್ಟ ಮತ್ತೊಂದು ಮಹಾಮಾರಿ; ಏನಿದು ಡೆಲ್ಟಾ ಪ್ಲಸ್ ವೈರಸ್?

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕೊರೊನಾ ಎರಡನೆ ಅಲೆ ನಡುವೆಯೇ ರಾಜ್ಯ ಇದೀಗ ಮತ್ತೊಂದು ವೈರಸ್ ಅಪ್ಪಳಿಸಿದ್ದು, ಡೆಲ್ಟಾ ಪ್ಲಸ್ ಎಂಬ ಮಹಾಮಾರಿ ಆರ್ಭಟ ಮೈಸೂರಿನಲ್ಲಿ ಆರಂಭವಾಗಿದೆ.

ಈಗಾಗಲೇ ಮಹಾರಷ್ಟ್ರ, ಕೇರಳ ರಾಜ್ಯಗಳಲ್ಲಿ ಡೆಲ್ಟಾ ಫ್ಲಸ್ ವೈರಸ್ ಪತ್ತೆಯಾಗಿತ್ತು. ಆದರೀಗ ಮೈಸೂರು ಜಿಲ್ಲೆಯಲ್ಲಿ ಎನ್ ಸಿ ಬಿಎಸ್ ನಡೆಸಿದ ಜೀನೋಮಿಕ್ ಸ್ವೀಕ್ವೆನ್ಸಿಂಗ್ ನಲ್ಲಿ ಡೆಲ್ಟಾ ಪ್ಲಸ್ ರೂಪಾಂತರಿ ತಳಿ ವೈರಸ್ ಪತ್ತೆಯಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಭಾರತದಲ್ಲಿ 12 ಡೆಲ್ಟಾ ಪ್ಲಸ್ ತಳಿಯ ಪ್ರಕರಣ ವರದಿಯಾಗಿದೆ B.1.617.2 ಮತ್ತುK417Nಅಳಿಯ ಮಿಶ್ರಣವೇ ಡೆಲ್ಟಾ ಪ್ಲಸ್ ಎಂದು ಹೇಳಲಾಗಿದೆ. ಇದು ಕೊರೊನಾದ ಹೊಸ ರೂಪಾಂತರವಾಗಿದ್ದು, ವೇಗವಾಗಿ ಹರಡುವುದಿಲ್ಲ ಆದರೆ ವ್ಯಾಕ್ಸಿನ್ ನೀಡುವ ರೋಗ ನಿರೋಧಕ ಶಕ್ತಿ ಮೀರುತ್ತೆ. ರೋಗ ನಿರೋಧಕ ಶಕ್ತಿಗೆ ಸೆಡ್ಡುಹೊಡೆಯುತ್ತದೆ. ಲಸಿಕೆ ಪಡೆದವರಿಗೂ, ಗುಣಮುಖರಾದವರಿಗೂ ಡೆಲ್ಟಾ ವೈರಸ್ ಅತ್ಯಾಕ್ ಆಗುವ ಸಾಧ್ಯತೆಯಿದೆ. ಈ ಬಗ್ಗೆ ಇನ್ನಷ್ಟು ಅಧ್ಯಯನಗಳು ನಡೆಯುತ್ತಿವೆ.

2 ವರ್ಷದ ಮಗು ಕೊರೊನಾಗೆ ಬಲಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button