Latest

ಮರಳಿ ದಕ್ಕಿತು ಡೆನ್ಮಾರ್ಕ್ ವ್ಯಕ್ತಿ ಬೆಂಗಳೂರಿನಲ್ಲಿ ಕಳೆದುಕೊಂಡ ವಾಚ್

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಇತ್ತೀಚೆಗೆ ಡೆನ್ಮಾರ್ಕ್ ನ ಉದ್ಯಮಿಯೊಬ್ಬರು ಬೆಂಗಳೂರಿನಲ್ಲಿ ಕಳೆದುಕೊಂಡಿದ್ದ ವಾಚು ಪುನಃ ಅವರ ಕೈ ಸೇರಿದೆ.

ಇದರ ಹಿಂದಿನ ಏರ್ ಪೋರ್ಟ್ ಉದ್ಯೋಗಿಗಳ ಕಾರ್ಯನಿಷ್ಠೆಯನ್ನು ಡೆನ್ಮಾರ್ಕ್ ನ ವ್ಯಕ್ತಿ “ಪವರ್ ಆಫ್ ಇಂಡಿಯಾ’ ಎಂದು ಬಣ್ಣಿಸಿದ್ದಾರೆ.

ಉದ್ಯಮಿ ಆ್ಯಂಡರ್ಸ್ ಆ್ಯಂಡರ್ಸನ್ ಅವರು ಇತ್ತೀಚೆಗೆ ಬೆಂಗಳೂರಿಗೆ ಆಗಮಿಸಿದ್ದರು.  ಹಿಂದಿರುಗುವ ವೇಳೆ ಎಕ್ಸ್ ರೇ ಟ್ರೇ ನಲ್ಲಿ ತಮ್ಮ ಬೆಲೆಬಾಳುವ ವಾಚು ಬಿಟ್ಟುಹೋಗಿದ್ದರೆನ್ನಲಾಗಿದೆ.

ನಂತರದಲ್ಲಿ ಅವರು ಇ-ಮೇಲ್ ಒಂದನ್ನು ಕಳುಹಿಸಿ ಈ ವಿಷಯ ತಿಳಿಸಿದ್ದರು. ಅವರು ಕಳಿಸಿದ ಇ-ಮೇಲ್ ಏರ್‌ಪೋರ್ಟ್ ಎಂಗೇಜ್‌ಮೆಂಟ್ ಸೆಂಟರ್ ತಲುಪಿದ ಕ್ಷಣಗಳಲ್ಲೇ ತಕ್ಷಣದಲ್ಲಿ ಅವರಿಗೆ ಉತ್ತರ ಹೋಯಿತಲ್ಲದೆ ಏರ್ ಪೋರ್ಟ್ ಸಿಬ್ಬಂದಿ ಪ್ರಯತ್ನದಿಂದ ಕಳೆದಿದ್ದ ವಾಚು ಮರಳಿ ಸಿಕ್ಕಿದೆ.

Home add -Advt

ನಟ ವಿಜಯ್ ದೇವರಕೊಂಡಗೆ ಇಡಿ ವಿಚಾರಣೆ

Related Articles

Back to top button