Belagavi NewsBelgaum NewsKannada NewsKarnataka NewsLatest

*ಪ್ರಯಾಗರಾಜ್ ಗೆ ಬೆಳಗಾವಿಯ ಇಬ್ಬರು ಅಧಿಕಾರಿಗಳ ನಿಯೋಜನೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಪ್ರಯಾಗರಾಜ್ ಮಹಾಕುಂಭ ಮೇಳದಲ್ಲಿ ಬೆಳಗಾವಿಯ ನಾಲ್ವರು ಭಕ್ತರು ಮೃತಪಟ್ಟಿರುವ ಹಿನ್ನೆಲೆಯಲ್ಲಿ ಇಬ್ಬರು ಅಧಿಕಾರಿಗಳನ್ನು ಅಲ್ಲಿಗೆ ತಕ್ಷಣವೇ ನಿಯೋಜನೆ ಮಾಡಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

ಬೆಳಗಾವಿಯ ಮೇಘಾ ದೀಪಕ ಹತ್ತರವಾಠ (24), ಜ್ಯೋತಿ ದೀಪಕ ಹತ್ತರವಾಠ (44), ಅರುಣ ಕೋಪರ್ಡಜೆ (61) ಮತ್ತು ಮಹಾದೇವ ಹನುಮಂತ ಬಾವನೂರ್ (48) ಪ್ರಯಾಗ ರಾಜ್ ನಲ್ಲಿ ಬುಧವಾರ ನಡೆದ ಕಾಲ್ತುಳಿತದಲ್ಲಿ ಸಾವಿಗೀಡಾಗಿದ್ದಾರೆ.

Home add -Advt

ಅವರ ಕುಟುಂಬದವರು ಮೃತದೇಹವನ್ನು ತರುವುದಕ್ಕಾಗಿ ಜಿಲ್ಲಾಡಳಿತದ ಸಹಾಯ ಯಾಚಿಸಿರುವ ಹಿನ್ನೆಲೆಯಲ್ಲಿ ಇಬ್ಬರು ಅಧಿಕಾರಿಗಳನ್ನು ಕಳಿಸಲಾಗಿದೆ. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶೃತ್ ಎನ್ ಎಸ್ ಮತ್ತು ಆರ್ ಆರ್ ಪ್ರೊಜೆಕ್ಟ್ ವಿಶೇಷ ಜಿಲ್ಲಾಧಿಕಾರಿ ಹರ್ಷ ಶೆಟ್ಟಿ ಅವರನ್ನು ನಿಯೋಜಿಸಲಾಗಿದ್ದು, ಇಬ್ಬರೂ ತಕ್ಷಣ ಅಲ್ಲಿಗೆ ತೆರಳಿ ಉತ್ತರ ಪ್ರದೇಶ ಸರಕಾರದೊಂದಿಗೆ ಸಂಪರ್ಕ ಸಾಧಿಸಿ ಮೃತದೇಹಗಳನ್ನು ಬೆಳಗಾವಿಗೆ ತರುವ ವ್ಯವಸ್ಥೆ ಮಾಡಲು ಸೂಚಿಸಲಾಗಿದೆ.

Related Articles

Back to top button