Latest

ಮೂರು ದಿನ ಪತ್ನಿ ಮೂರು ದಿನ ಪ್ರಿಯತಮೆಯೊಂದಿಗೆ ವಾಸ; ಕೋರ್ಟ್ ಮೆಟ್ಟಿಲೇರಿದ ಪೊಲೀಸರೇ ರಾಜಿ ಮಾಡಿದ್ದ ಪ್ರಕರಣ

ಪ್ರಗತಿವಾಹಿನಿ ಸುದ್ದಿ; ರಾಂಚಿ: ಇದು ಪೊಲೀಸರೇ ರಾಜೀ ಮಾಡಿಸಿದ್ದ ವಿಚಿತ್ರ ಪ್ರಕರಣ. ವ್ಯಕ್ತಿಯೊಬ್ಬನಿಗೆ ಮೂರು ದಿನ ಪತ್ನಿ , ಮೂರು ದಿನ ಪ್ರಿಯತಮೆಯೊಂದಿಗೆ ಇರಲು ಅವಕಾಶ ನೀಡಿದ್ದ ಪ್ರಕರಣ ಇದೀಗ ಕೋರ್ಟ್ ಮೆಟ್ಟಿಲೇರಿರುವ ಘಟನೆ ಜಾರ್ಖಂಡ್ ರಾಜಧಾನಿ ರಾಂಚಿಯಲ್ಲಿ ನಡೆದಿದೆ.

ರಾಂಚಿಯ ರಾಜೇಶ್ ಎಂಬಾತನಿಗೆ ಅದಾಗಲೇ ವಿವಾಹವಾಗಿ ಒಂದು ಮಗುವಿದೆ. ಆದಾಗ್ಯೂ ಈ ವಿಷಯವನ್ನು ಮುಚ್ಚಿಟ್ಟು ಯುವತಿಯೊಬ್ಬಳನ್ನು ಪ್ರೀತಿಸಿ ವಿವಾಹವಾಗಿದ್ದ. ಪತಿಯ ಎರಡನೇ ಮದುವೆ ವಿಚಾರ ತಿಳಿದ ಪತ್ನಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಳು. ಪೊಲೀಸರು ರಾಜೇಶ್ ಗೆ ರಾಜೀ ಮಾಡಿಕೊಳ್ಳುವಂತೆ ಹೇಳಿ ಮೂರು ದಿನ ಪತ್ನಿಯ ಜೊತೆ

ಮೂರುದಿನ ಎರಡನೇ ಪತ್ನಿಯ ಜೊತೆ ಇನ್ನೊಂದು ದಿನ ಇಷ್ಟಬಂದತೆ ಇರಬಹುದು ಎಂದು ಹೇಳಿ ಸಂಧಾನ ಮಾಡಿಸಿದ್ದರು.

ಆದರೆ ಇದೀಗ ಎರಡನೇ ಪತ್ನಿ ಕೂಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪತಿ ಮೊದಲ ವಿವಾಹ ಮುಚ್ಚಿಟ್ಟು ತನ್ನನ್ನು ಮದುವೆಯಾಗಿದ್ದೂ ಅಲ್ಲದೇ  ಲೈಂಗಿಕ ಶೋಷಣೆ ನೀಡುತ್ತಿದ್ದಾನೆ ಎಂದು ದೂರಿದ್ದಾಳೆ. ಪ್ರಕರಣ ಕೋರ್ಟ್ ಮೆಟ್ಟಿಲೇರಿದ್ದು, ರಾಜೇಶ್ ಬಂಧನಕ್ಕೆ ನ್ಯಾಯಾಲಯ ಆದೇಶ ನೀಡಿದೆ.

Home add -Advt

Related Articles

Back to top button