Belagavi NewsBelgaum NewsKannada NewsKarnataka NewsLatest

*ಕಾಡು ಬಿಟ್ಟು ನಾಡಿಗೆ ಲಗ್ಗೆಯಿಟ್ಟು ಕಾಡು ಕೋಣ : ಓರ್ವ ವ್ಯಕ್ತಿಯ ಮೇಲೆ ದಾಳಿ*

ಪ್ರಗತಿವಾಹಿನಿ ಸುದ್ದಿ: ಕಾಡು ಬಿಟ್ಟು ನಾಡಿಗೆ ಲಗ್ಗೆಯಿಟ್ಟು ಓರ್ವ ವ್ಯಕ್ತಿಯ ಮೇಲೆ ಕಾಡುಕೋಣ ದಾಳಿ ನಡೆಸಿ ಗಾಯಗೊಳಿಸಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಗೋಟುರ ಗ್ರಾಮದಲ್ಲಿ ನಡೆದಿದೆ.

ಏಕಾಏಕಿ ನೆರೆಯ ಮಹಾರಾಷ್ಟ್ರದಿಂದ ರಾಜ್ಯದ ಗಡಿದಾಟಿ ಗೋಟುರ ಗ್ರಾಮದಲ್ಲಿ ಕಾಣಿಸಿಕೊಂಡಿದ್ದ ಕಾಡುಕೋಣ ಗ್ರಾಮದ ಕಬ್ಬಿನ ಗದ್ದೆಯಲ್ಲಿ ಅವಿತುಕೊಂಡಿದ್ದು, ಅಲ್ಲಿಯೇ ಇದ್ದ ರೈತ ರಾಕೇಶ ಭಮ್ಮನ್ನವರ ಅವರ ಮೇಲೆ ದಾಳಿ ಮಾಡಿದೆ. ಗಾಯಾಳು ರಾಕೇಶ ಸಂಕೇಶ್ವರ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಇನ್ನು ವಿಷಯ ತಿಳಿದ ಅರಣ್ಯ ಇಲಾಖೆ ಸಿಬ್ಬಂದಿ ಕಾಡುಕೋಣ ಸೆರೆ ಹಿಡಿಯಲು ಸ್ಥಳಕ್ಕೆ ಆಗಮಿಸಿದ್ದಾರೆ‌. ಆದರೆ ಕಬ್ಬಿನ ಹೊಲದಲ್ಲಿ ಅವಿತುಕೊಂಡಿರುವ ಕಾಡುಕೋಣ ಯಾರ ಕಣ್ಣಿಗು ಕಾಣದೆ ಅವಿತು ಕುಳಿತಿದೆ‌. ಗೋಟುರ ಗ್ರಾಮಕ್ಕೆ ನುಗ್ಗಿರುವ ಕಾಡುಕೋಣದ ದಾಳಿಯಿಂದ ಗ್ರಾಮದಲ್ಲಿ ಜನರು ಬೆಚ್ಚಿ ಬಿದ್ದಿದ್ದಾರೆ‌. ಸಂಕೇಶ್ವರ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ‌.

https://pragativahini.com/rameshwaram-cafe-bomb-blast-casebjp-ledernia-custody

Related Articles

Back to top button