Kannada NewsKarnataka NewsLatest

*ಕಚೇರಿಯಲ್ಲಿಯೇ ಹಿರಿಯ ಪೊಲೀಸ್ ಅಧಿಕಾರಿಯ ರಾಸಲೀಲೆ: ಡಿಜಿಪಿ ರಾಮಚಂದ್ರ ರಾವ್ ವಿಡಿಯೋ ವೈರಲ್*

ಪ್ರಗತಿವಾಹಿನಿ ಸುದ್ದಿ: ಪ್ರಸ್ತುತ ಡಿಸಿಆರ್ ಇ ಆಗಿ ಕಾರ್ಯನಿರ್ವಹಿಸುತ್ತಿರುವ ಹಿರಿಯ ಪೊಲೀಸ್ ಅಧಿಕಾರಿ ರಾಮಚಂದ್ರ ರಾವ್ ಅವರ ರಾಸಲೀಲೆ ವಿಡಿಯೋ ಭಾರಿ ವೈರಲ್ ಆಗಿದೆ.

ಡಿಜಿಪಿ ರಾಮಚಂದ್ರ ರಾವ್ ಕರ್ತವ್ಯದಲ್ಲಿದ್ದಾಗ ತಮ್ಮ ಕಚೇರಿಯಲ್ಲಿಯೇ ಸಮವಸ್ತ್ರದಲ್ಲಿ ಮಹಿಳೆಯರೊಂದಿಗೆ ರಾಸಲೀಲೆಯಲ್ಲಿ ತೊಡಗಿರುವ ಹಸಿಬಿಸಿ ದೃಶ್ಯಗಳು ವೈರಲ್ ಆಗಿದ್ದು, ಇಡಿ ಪೊಲೀಸ್ ಇಲಾಖೆಯ ಮರ್ಯಾದೆ ಹರಾಜುಗುವಂತಾಗಿದೆ.

ಒಬ್ಬ ಹಿರಿಯ ಪೊಲೀಸ್ ಅಧಿಕಾರಿ ಕಚೇರಿಯಲ್ಲಿಯೇ ತನ್ನ ಚೇಂಬರ್ ನಲ್ಲಿ ಹಲವು ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸಿರುವ, ತಬ್ಬಿ ಮುತ್ತಿಡುತ್ತಿರುವ ವಿಡಿಯೋಗಳು ವೈರಲ್ ಆಗಿವೆ.

ರಾಮಚಂದ್ರರಾವ್, ಅಕ್ರಮ ಚಿನ್ನ ಸಾಗಾಣಿಕೆ ಪ್ರಕರಣದಲ್ಲಿ ಜೈಲು ಸೇರಿರುವ ನಟಿ ರನ್ಯಾ ರಾವ್ ಅವರ ಮಲತಂದೆ. ಡಿಜಿಪಿಯಾಗಿದ್ದಾಗಿನ ರಾಮಚಂದ್ರ ರಾವ್ ಅವರ ಕೆಲ ರಾಸಲೀಲೆ ವಿಡಿಯೋಗಳು ಹರಿದಾಡುತ್ತಿವೆ. ಒಂದು ವರ್ಷದ ಹಿಂದಿನ ಹಾಗೂ ಅದಕ್ಕೂ ಹಿಂದಿನ ಕೆಲ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಧಿಕಾರಿಯನ್ನು ತಕ್ಷಣ ಅಮಾನತುಗೊಳಿಸಬೇಕು ಹಗೂ ಅವರ ವಿರುದ್ಧ ಕಾನೂನು ಕ್ರಮ ಕೈಗೊಲ್ಳಬೇಕು ಎಂಬ ಆಗ್ರಹ ಕೇಳಿಬಂದಿದೆ.

Home add -Advt


Related Articles

Back to top button