Kannada NewsLatest

1100 ಎಕರೆ ಜಮೀನಿಗೆ ನಿರಾವರಿ ಸೌಲಭ್ಯ; ಸಚಿವೆ ಶಶಿಕಲಾ ಜೊಲ್ಲೆ ಭರವಸೆ

ಪ್ರಗತಿವಾಹಿನಿ ಸುದ್ದಿ; ಚಿಕ್ಕೋಡಿ : ಢೋಣೆವಾಡಿ ಮತ್ತು ಕಸನಾಳ ೧೫ ಕೋಟಿ ೮೫ ಲಕ್ಷ ರೂ.ಗಳ ಏತ ನೀರಾವರಿ ಯೋಜನೆಗೆ ಸಚಿವೆ ಶಶಿಕಲಾ ಜೊಲ್ಲೆ ಹಾಗೂ ಸಂಸದ ಅಣ್ಣಾಸಾಹೇಬ ಜೊಲ್ಲೆ ಚಾಲನೆ ನೀಡಿದರು.

ನಿಪ್ಪಾಣಿ ಮತಕ್ಷೇತ್ರದ ಢೋಣೆವಾಡಿ ಮತ್ತು ಕಸನಾಳ ಗ್ರಾಮದಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ ೧೫ ಕೋಟಿ ೮೫ ಲಕ್ಷ ರೂ.ಗಳ ನಿಧಿ ಮಂಜೂರಾಗಿದೆ. ಢೋಣೆವಾಡಿ ಗ್ರಾಮಕ್ಕೆ ೭ ಕೋಟಿ ೧೦ ಲಕ್ಷ ರೂ.ಗಳ ನಿಧಿ ಮಂಜೂರಾಗಿದೆ. ಕಸನಾಳ ಗ್ರಾಮಕ್ಕೆ ೮ ಕೋಟಿ ೭೫ ಲಕ್ಷ ಮಂಜೂರಾಗಿದೆ. ಇದು ರೈತರ ಹಿತಕಾಯುವ ಯೋಜನೆಯಾಗಿದ್ದು, ಈ ಯೋಜನೆಯಿಂದಾಗಿ ಢೋಣೆವಾಡಿಯಲ್ಲಿ ೬೦೦ ಎಕರೆ ಹಾಗೂ ಕಸನಾಳನಲ್ಲಿ ೪೫೦ ಎಕರೆ ಜಮೀನು ಒಲಿತಕ್ಕೆ ಬರಲಿದೆ. ಎರಡೂ ಗ್ರಾಮಗಳ ರೈತರು ಮುತುವರ್ಜಿ ವಹಿಸಿ ಕೂಡಲೇ ಪೈಪ್ ಲೈನ್ ಕಾಮಗಾರಿ ಪೂರ್ಣಗೊಳಿಸಿ ಗ್ರಾಮಗಳ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಸಂಸದ ಅಣ್ಣಾಸಾಹೇಬ ಜೊಲ್ಲೆ ಹೇಳಿದರು.

ಸಚಿವೆ ಶಶಿಕಲಾ ಜೊಲ್ಲೆ ಅವರ ಪ್ರಯತ್ನದಿಂದ ನಿಪ್ಪಾಣಿ ತಾಲೂಕಿನ ಕಸನಾಳ ಹಾಗೂ ಢೋಣೆವಾಡಿ ಗ್ರಾಮಗಳಿಗೆ ಸಣ್ಣ ನೀರಾವರಿ ಇಲಾಖೆಯಿಂದ ಮಂಜೂರಾದ ಗಂಗಾಕಲ್ಯಾಣ ನೀರು ಸರಬರಾಜು ಪೈಪ್ಲೈನ್ ಯೋಜನೆಯ ಕಾಮಗಾರಿಯನ್ನು ಸಂಸದ ಅಣ್ಣಾಸಾಹೇಬ ಜೊಲ್ಲೆ ಹಾಗೂ ಸಚಿವೆ ಶಶಿಕಲಾ ಜೊಲ್ಲೆ ಯವರ ಸಮ್ಮುಖದಲ್ಲಿ ಢೋಣೆವಾಡಿಯಲ್ಲಿ ಉದ್ಘಾಟಿಸಲಾಯಿತು.

ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿ, ನಿಪ್ಪಾಣಿ ಕ್ಷೇತ್ರದ ೧೩ ಗ್ರಾಮಗಳು ನನಗೆ ೬೫೦೦ ಮತಗಳ ಮುನ್ನಡೆ ತಂದುಕೊಟ್ಟಿವೆ. ಇದನ್ನು ನಾನು ಎಂದಿಗೂ ಮರೆಯುವುದಿಲ್ಲ. ನಿಪ್ಪಾಣಿ ಕ್ಷೇತ್ರದ ಎಲ್ಲ ಗ್ರಾಮಗಳು ನನ್ನ ತವರು ಮನೆ ಇದ್ದ ಹಾಗೆ. ಸೊಸೆಯಾಗಿ ಹಾಗೂ ಮಗಳಾಗಿ ಸೇವೆ ಸಲ್ಲಿಸುವ ಅವಕಾಶವನ್ನು ನನ್ನ ಪತಿ ಅಣ್ಣಾಸಾಹೇಬ ಜೊಲ್ಲೆ ಇವರಿಂದ ಸಿಕ್ಕಿದ್ದು, ಈ ಅವಕಾಶವನ್ನು ಸಾರ್ಥಕಪಡಿಸಿಕೊಳ್ಳುತ್ತೇನೆ ಎಂದರು. ಕಾರದಗಾ ಧೂದಗಂಗಾ ನದಿಯಿಂದ ಎರಡೂ ಗ್ರಾಮಗಳಿಗೆ ಪೈಪ್‌ಲೈನ್ ಅಳವಡಿಸಲಾಗುವುದು. ಕಾರದಗಾದಿಂದ ಕಸನಾಳವರೆಗೆ ೭೧೭೧ ಮೀಟರ್ ಉದ್ದದ ಪೈಪ್‌ಲೈನ್ ಇದ್ದು, ೨೩೦ ಎಚ್‌ಪಿ ಸಾಮರ್ಥ್ಯದ ೩ ಪಂಪ್‌ಗಳನ್ನು ಅಳವಡಿಸಿ ನೀರು ಹರಿಸಲಾಗುವುದು. ಕಾರದಗಾ-ಧೋಣೆವಾಡಿಗೆ ೪೯೦೧ ಮೀಟರ್ ಪೈಪ್‌ಲೈನ್ ಇದ್ದು, ನೀರು ಪಂಪ್ ಮಾಡಲು ೧೭೦ ಎಚ್‌ಪಿಯ ೩ ಪಂಪ್‌ಗಳನ್ನು ಅಳವಡಿಸಲಾಗಿದೆ. ಎರಡೂ ಯೋಜನೆಗಳಿಗೆ ೨೪ ಗಂಟೆ ಉಚಿತ ವಿದ್ಯುತ್ ಪೂರೈಕೆ ಮಾಡಲಾಗುವುದು. ಅಲ್ಲದೆ, ಯೋಜನೆ ಪೂರ್ಣಗೊಂಡ ಐದು ವರ್ಷಗಳವರೆಗೆ ಪೈಪ್‌ಲೈನ್ ನಿರ್ವಹಣಾ ವೆಚ್ಚವನ್ನು ರೈತರಿಂದ ಭರಿಸಲಾಗುವುದಿಲ್ಲ.

ಸಂಸದ ಅಣ್ಣಾಸಾಹೇಬ ಜೊಲ್ಲೆ, ಸಚಿವೆ ಶಶಿಕಲಾ ಜೊಲ್ಲೆ, ಸದ್ಗುರು ಅಪ್ಪಾ ಮಹಾರಾಜರ ಮಠದ ಮಠಾಧೀ±ರಾದÀ ವಿಠ್ಠಲ ಮಹಾರಾಜರು, ಆತ್ಮ ಮಾಲಿಕ್ ಧ್ಯಾನಪೀಠದ ಸಾಧನಾನಂದ ಮಹಾರಾಜರು ಸಸಿಗಳಿಗೆ ನೀರುಣಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ನಿಪ್ಪಾಣಿ ಗ್ರಾಮೀಣ ಬಿಜೆಪಿ ಅಧ್ಯಕ್ಷ ಪವನ ಪಾಟೀಲ, ಶಿವಾಜಿ ಖೋತ, ಜಿ.ಪಂ. ಅಧ್ಯಕ್ಷ ತುಕಾರಾಮ ಮಾಳಿ, ಸಾಧನಂದ ಮಹಾರಾಜರು ಕೂಡ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಲಕ್ಷ್ಮಿ ದೇವಸ್ಥಾನ ಮಂಡಳಿ, ಅಕ್ಕಮಹಾದೇವಿ ಟ್ರಸ್ಟ್, ಸದ್ಗುರು ಅಪ್ಪ್ಪಾ ಮಹಾರಾಜ ಭಜನಿ ಮಂಡಳ, ಆತ್ಮ ಮಾಲಿಕ್ ಧ್ಯಾನಪೀಠ, ಮಾಲಕರಸಿದ್ಧ ಮಂದಿರ ಸಮಿತಿ, ಡಾ. ಬಾಬಾಸಾಹೇಬ ಅಂಬೇಡ್ಕರ್ ಗಂಗಾಕಲ್ಯಾಣ ಸಮಿತಿ, ಢೋಣೆವಾಡಿ ಗ್ರಾಮ ಪಂಚಾಯಿತಿ ಹಾಗೂ ಗ್ರಾಮಸ್ಥರು, ಕಸನಾಳ ಗ್ರಾಮಸ್ಥರು, ನಂದಿನಿ ದಿಲೀಪ ಕಾಂಬಳೆ, ಸ್ನೇಹಾ ಜನಾರ್ದನ ಘಾಟಗೆ ಸೇರಿದಂತೆ ನಾನಾ ಸಂಘಟನೆಗಳ ಪರವಾಗಿ ಸಂಸದ ಜೊಲ್ಲೆ ಹಾಗೂ ಸಚಿವ ಜೊಲ್ಲೆ ಅವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಮಾಜಿ ತಾಲೂಕ ಪಂಚಾಯತ ಸದಸ್ಯರಾದ ದಾದಾಸೋ ನರಗಟ್ಟೆ, ಗ್ರಾಮ ಪಂಚಾಯತ ಅದ್ಯಕ್ಷರಾದ ತುಕಾರಾಮ ಮಾಳಿ, ಚಿಮಾಸೋ ನಾಡಗೆ, ಸಕಾರಾಮ ನಾಗರಾಳೆ, ಜರ್ನಾಧನ ಘಾಟಗೆ, ಅರವಿಂದ ಪಾಟೀಲ, ಶೀವಾಜಿ ಖೋತ, ಅಜೀತ ಖೋತ, ಸಂಬಾಜಿ ನಾಯಿಕ, ಸಂತೋಷ ಹಜಾರೆ, ವಿಶ್ವಾಸ ನಾಯಿಕ,ಸಂಜಯ ಸೌಂದಲಗೆ, ದಾದಾಸೋ ಸುತಾರ, ಶ್ರೀಕಾಂತ ಮಾಕವೆ, ಸಂತೋಷ ಘಾನಗೇರ, ಪಕ್ಷದ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ಅಸನಿ ಚಂಡಮಾರುತ ಭೀತಿ; ಹೈ ಅಲರ್ಟ್ ಘೋಷಣೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button