
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿಯಲ್ಲಿ ಸೋಮವಾರ ಮಹಾರಾಷ್ಟ್ರ ಏಕಾಕರಣ ಸಮಿತಿ ಹಮ್ಮಿಕೊಂಡಿರುವ ಮಹಾಮೇಳಾವದಲ್ಲಿ ಭಾಗವಹಿಸಲು ಆಗಮಿಸಲಿದ್ದ ಮಹಾರಾಷ್ಟ್ರ ಸಂಸದರೂ, ಅಲ್ಲಿನ ಗಡಿ ಸಲಹಾ ಸಮಿತಿ ಅಧ್ಯಕ್ಷರೂ ಆಗಿರುವ ಧೈರ್ಯಶೀಲ್ ಮಾನೆಗೆ ಬೆಳಗಾವಿ ಪ್ರವೇಶವನ್ನು ನಿಷೇಧಿಸಿ ಬೆಳಗಾವಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
ನಾಳೆ ಬೆಳಗಾವಿಯ ವ್ಯಾಕ್ಸಿನ್ ಡಿಪೋದಲ್ಲಿ ಎಂಇಎಸ್ ಆಯೋಜಿಸಿದ್ದ ಮಹಾಮೇಳಾವ್ ಗೆ ಆಗಮಿಸುವುದಾಗಿ ಮಹಾರಾಷ್ಟ್ರ ಸಂಸದ ಧೈರ್ಯಶೀಲ್ ಮಾನೆ ಹೇಳಿದ್ದರು. ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಹಾಗೂ ಮುಂಜಾಗೃತಾ ಕ್ರಮವಾಗಿ ಸಾರ್ವಜನಿಕರ ನೆಮ್ಮದಿ ದೃಷ್ಟಿಯಿಂದ ಮಹಾರಾಷ್ಟ್ರ ಸಂಸದರಿಗೆ ಬೆಳಗಾವಿ ಪ್ರವೇಶಕ್ಕೆ ನಿರ್ಬಂಧ ವಿಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಜಿಲ್ಲಾಧಿಕಾರಿ ಆದೇಶ ಇಲ್ಲಿದೆ –
19.12.2022 ರಂದು ಮಹಾರಾಷ್ಟ್ರ ರಾಜ್ಯದ ಸಂಸದರು ಧೈರ್ಯಶೀಲ ಮಾನೆ ಇವರು ಬೆಳಗಾವಿ ಜಿಲ್ಲೆಗೆ ಆಗಮಿಸಿ ಬೆಳಗಾವಿ ನಗರದ ವ್ಯಾಕ್ಸಿನ್ ಡಿಪೋ ಮೈದಾನದಲ್ಲಿ ಮಧ್ಯವರ್ತಿ ಮಹಾರಾಷ್ಟ್ರ ಏಕೀಕರಣ ಸಮಿತಿಯವರು ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಭಾಗವಹಿಸುವವರಿದ್ದು, ಆ ಸಂದರ್ಭದಲ್ಲಿ ಪ್ರಚೋದನಾಕಾರಿ ಭಾಷಣ ಅಥವಾ ಪ್ರಚೋದನಾಕಾರಿ ಹೇಳಿಕೆ ನೀಡುವ ಸಾಧ್ಯತೆಗಳು ಇರುತ್ತವೆ. ಇದರಿಂದ ಭಾಷಾ ವೈಷಮ್ಯ ಬೆಳೆದು ಹೆಚ್ಚಿನ ಪ್ರಮಾಣದಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟಾಗುವ ಸಾಧ್ಯತೆಗಳಿರುತ್ತವೆ. ಅದು ಅಲ್ಲದೇ ಸಾರ್ವಜನಿಕರ ಆಸ್ತಿ ಪಾಸ್ತಿಗಳಿಗೆ ಹಾನಿ ಉಂಟಾಗುವುದನ್ನು ಹಾಗೂ ಕರ್ನಾಟಕದ ಮರಾಠಿ ನಿವಾಸಿಗರನ್ನು ಪ್ರಚೋದಿಸುವ ಸಾದ್ಯತೆ ಇರುವುದರಿಂದ, ಬೆಳಗಾವಿ ಜಿಲ್ಲೆಯಲ್ಲಿ ಕಾನೂನು ಸುವ್ಯಸ್ಥೆಯನ್ನು ಹಾಗೂ ಸಾರ್ವಜನಿಕರ ನೆಮ್ಮದಿಯನ್ನು ಕಾಪಾಡುವ ಹಿತದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ನಾನು, ನಿತೇಶ್.ಕೆ.ಪಾಟೀಲ ಭಾ.ಆ.ಸೇ. ಜಿಲ್ಲಾ ದಂಡಾಧಿಕಾರಿ, ಬೆಳಗಾವಿ ಜಿಲ್ಲೆ ಸಿಆರ್‌ಪಿಸಿ 1973 ಕಲಂ. 144 (3) ರನ್ವಯ ನನ್ನಲ್ಲಿ ಪ್ರದತ್ತ ಅಧಿಕಾರದ ಮೇರೆಗೆ ದಿನಾಂಕ: 19.12.2022 ರಂದು ಮಹಾರಾಷ್ಟ್ರ ರಾಜ್ಯದ ಧೈರ್ಯಶೀಲ ಮಾನೆ ಮಾನ್ಯ ಸಂಸದರು ಇವರು ಬೆಳಗಾವಿ ಜಿಲ್ಲೆಯ ಗಡಿಯೊಳಗೆ ಪ್ರವೇಶಿಸದಂತೆ ಕ್ರಮ ವಹಿಸಲು ಈ ನಿರ್ಭಂಧಿತ ಆದೇಶವನ್ನು ಹೊರಡಿಸಿರುತ್ತೇನೆ ಎಂದು ಡಿಸಿ ತಿಳಿಸಿದ್ದಾರೆ.
ಆದೇಶದ ಪ್ರತಿ ಇಲ್ಲಿದೆ – CRPC 144(3) ORDER
*ಬೆಳಗಾವಿ: ಕಲಾಪದ ಆರಂಭದಲ್ಲೇ ಕಿಚ್ಚು ಹೊತ್ತಲಿದೆಯಾ ಸಾವರ್ಕರ್ ಫೋಟೋ ಸಮರ?*
https://pragati.taskdun.com/savarkar-photobelagavisuvarnavidhanasoudha/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ