ಪ್ರಗತಿವಾಹಿನಿ ಸುದ್ದಿ, ಮುಂಬಯಿ: “ಆದಿ ಪುರುಷ್’ ಚಿತ್ರದ ಸಂಭಾಷಣೆಕಾರ ಮನೋಜ್ ಮುಂತಶಿರ್ ಶುಕ್ಲಾ ಅವರು ಈ ಸಿನಿಮಾದಿಂದ ಜನರ ಭಾವನೆಗಳಿಗೆ ಧಕ್ಕೆಯಾಗಿದೆ ಎಂಬುದನ್ನು ಒಪ್ಪಿಕೊಳ್ಳುತ್ತೇನೆ ಎಂದಿದ್ದಾರೆ. ಇದಕ್ಕಾಗಿ ಅವರು ಕ್ಷಮೆ ಕೂಡ ಯಾಚಿಸಿದ್ದಾರೆ.
ಈ ಕುರಿತು “ನಾನು ಕೈಮುಗಿದು ನನ್ನ ಬೇಷರತ್ ಕ್ಷಮೆಯಾಚಿಸುತ್ತೇನೆ… ಪ್ರಭು ಬಜರಂಗ ಬಲಿ ನಮ್ಮನ್ನು ಒಗ್ಗೂಡಿಸಲಿ” ಎಂದು ಅವರು ಶನಿವಾರ ಟ್ವೀಟ್ ಮಾಡಿದ್ದಾರೆ.
ಹಿಂದೂ ಮಹಾಕಾವ್ಯ ರಾಮಾಯಣವನ್ನು ಆಧರಿಸಿದ ಈ ಚಲನಚಿತ್ರ ಅದರ ಸಂಭಾಷಣೆಗಳು ಮತ್ತು ಧಾರ್ಮಿಕ ಪಾತ್ರಗಳ ಚಿತ್ರಣಕ್ಕಾಗಿ ಟೀಕೆಗೊಳಗಾಗಿದೆ. ಚಿತ್ರದಲ್ಲಿ ರಾಮ, ರಾವಣ, ಹನುಮಂತ ಸೇರಿದಂತೆ ಎಲ್ಲ ಪಾತ್ರಗಳನ್ನು ಅಸಹಜ ಮತ್ತು ಟೀಕಾಸ್ಪದ ರೀತಿಯಲ್ಲಿ ಬಿಂಬಿಸಿದ್ದು ಚಿತ್ರದ ಡೈಲಾಗ್ ಗಳನ್ನು ‘ಟಪೋರಿ ಡೈಲಾಗ್ಸ್’ ಎಂದು ಜನ ಹೀಗಳೆದಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ