Kannada NewsKarnataka News

  ಮಹಾ‌‌‌ ಸಿಎಂ ವಿರುದ್ದ ವಿಭಿನ್ನ ಪ್ರತಿಭಟನೆ

https://youtu.be/AYAfl9ZUVKs

 

https://youtu.be/4FsqpTBz6jA

Home add -Advt

 

ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ -ಮಹಾರಾಷ್ಟ್ರ ಸಿಎಂ‌ ಉದ್ಧವ್ ಠಾಕ್ರೆ ಗಡಿ‌ ಕ್ಯಾತೆ ತೆಗೆದ ವಿಚಾರ ಹಾಗೂ ಶಿವಸೇನೆ ಕಾರ್ಯಕರ್ತರು ಕನ್ನಡ ಧ್ವಜಕ್ಕೆ‌ ಅಪಮಾನ  ವೆಸಗಿರುವುದನ್ನು ಖಂಡಿಸಿ ರಾಯಬಾಗ ಜಯಕರ್ನಾಟಕ ಸಂಘಟನೆ ಅನೀಲ‌ ಶೆಟ್ಟಿ  ನೇತೃತ್ವದಲ್ಲಿ ವಿಭಿನ್ನವಾಗಿ ಪ್ರತಿಭಟನೆ ನಡೆಸಿತು.
ಮಹಾರಾಷ್ಟ್ರ ಸಿಎಂ ಠಾಕ್ರೆ ಶವ ಒಯ್ಯಲು ಯಮರಾಜ ರಾಯಬಾಗಕ್ಕೆ ಬಂದು ಠಾಕ್ರೆ ಶವಕ್ಕೆ ಯಮರಾಜ ಹಗ್ಗ ಕಟ್ಟಿ ಎಳೆಯುವುದು, ಅಣಕು‌ ಶವಯಾತ್ರೆ, ಬೊಬ್ಬೆ ಹೊಡೆದು, ಕೇಶ ಮಂಡನೆ‌, ಟೈಯರ್ ಗೆ ಬೆಂಕಿ, ಶವ ಪ್ರತಿಕೃತಿ ದಹನ, ತಮಟೆ ಬಾರಿಸುವ ಮೂಲಕ ವಿಭಿನ್ನ ಪ್ರತಿಭಟನೆ ಮಾಡಲಾಯಿತು.
ರಾಯಬಾಗ ಪಟ್ಟಣದ ಜೈನ್ ಬಸ್ತಿಯಿಂದ‌ ಪ್ರಮಖ ರಸ್ತೆ ಮೂಲಕ ಯಮರಾಜ ಠಾಕ್ರೆ ಶವಕ್ಕೆ ಹಗ್ಗ ಕಟ್ಟಿ ದರ ದರನೆ ಎಳೆದುಕೊಂಡು ಬಂದು ಅಣಕು‌ ಶವಯಾತ್ರೆ ಮಾಡಿ ಪಟ್ಟಣದ ಸರ್ಕಲ್ ಬಳಿ ಮಾನವ ಸರ್ಪಳಿ ನಿರ್ಮಿಸಿ ಟೈಯರ್ ಗೆ ಬೆಂಕಿ ಹಚ್ಚಿ, ಬೊಬ್ಬೆ ಹೊಡೆದು ಮಹಾರಾಷ್ಟ್ರ ಸಿಎಂ ಹಾಗೂ ಎಂಇಎಸ್ ನಾಯಕರ ವಿರುದ್ದ ಘೋಷಣೆಗಳನ್ನು ಕೂಗಲಾಯಿತು. ಕೇಶ ಮಂಡನೆ‌ ಮಾಡಿಕೊಂಡು,  ಸಿಎಂ ಪ್ರತಿಕೃತಿ ದಹನ ಮಾಡುವುದರೊಂದಿಗೆ ವಿಭಿನ್ನ ಪ್ರತಿಭಟನೆ ನಡೆಸಿ ತಹಶಿಲ್ದಾರರ ಮೂಲಕ ಸರ್ಕಾರಕ್ಕೆ ‌ಮನವಿ‌ ಸಲ್ಲಿಸಿದರು.

https://youtu.be/Gvvr4XT93wo

 

Related Articles

Back to top button