Film & Entertainment

*5 ದಿನಗಳ ಹಿಂದೆಯೇ ನಿರ್ದೇಶಕ ಗುರುಪ್ರಸಾದ್ ನೇಣಿಗೆ ಶರಣಾಗಿರುವ ಶಂಕೆ*

ಪ್ರಗತಿವಾಹಿನಿ ಸುದ್ದಿ: ಸ್ಯಾಂಡಲ್ ವುಡ್ ಖ್ಯಾತ ನಿರ್ದೇಶಕ ಗುರುಪ್ರಸಾದ್ (52) ಆತ್ಮಹತ್ಯೆಗೆ ಶರಣಾಗಿದ್ದಾರೆ. ಬೆಂಗಳೂರು ಉತ್ತರ ತಾಲೂಕಿನ ಮಾದನಾಯಕನಹಳ್ಳಿ ಅಪಾರ್ಟ್ ಮೆಂಟ್ ನಲ್ಲಿ ಗುರುಪ್ರಸಾದ್ ನೇಣಿಗೆ ಕೊರಳೊಡ್ಡಿದ್ದು, ಐದಾರು ದಿನಗಳ ಹಿಂದೆಯೇ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

ಈ ಬಗ್ಗೆ ಡಿಸಿಪಿ ಸಿ.ಕೆ.ಬಾಬಾ ಸುದ್ದಿಗಾರರೊಂದಿಗೆ ಮಾತನಾಡುತ್ತಾ ತಿಳಿಸಿದ್ದು, ಗುರುಪ್ರಸಾದ್ ತಮ್ಮ ಫ್ಲ್ಯಾಟ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆಗಾಗ ಅವರ ಕುಟುಂಬದವರು ಬದು ಹೋಗುತ್ತಿದ್ದರು. 5-6 ದಿನಗಳ ಹಿಂದೆ ಬಂದು ಹೋಗಿದ್ದಾರೆ ಎಂಬ ಮಾಹಿತಿ ಇದೆ. ಭೇಟಿ ಬಳಿಕ ಮನೆಯೊಳಗೆ ಹೋದ ಗುರುಪ್ರಸಾದ್ ಮನೆಯಿಂದ ಹೊರ ಬಂದಿಲ್ಲ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಹಾಗಾಗಿ ಐದಾರು ದಿನಗಳ ಹಿಂದೆಯೇ ಅವರು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

Home add -Advt

ಇತ್ತೀಚೆಗೆ ಕೆಲವೊಂದು ವಿಚಾರವಾಗಿ ಬೇಸರದಲ್ಲಿದ್ದರು ಎನ್ನಲಾಗಿದೆ. ಇಂದು ಬೆಳಿಗ್ಗೆ ಅವರ ಮನೆ ಬಳಿ ವಾಸನೆ ಬರುತ್ತಿದ್ದ ಕಾರಣಕ್ಕೆ ಸೆಕ್ಯೂರಿಟಿ ಹಾಗೂ ಮತ್ತಿತರರು ಹೋಗಿ ಕಿಟಕಿ ತೆಗೆದು ನೋಡಿದಾಗ ಆತ್ಮಹತ್ಯೆಗೆ ಶರಣಾಗಿದ್ದು ಕಂಡು ಬಂದಿದೆ. ಮಾದನಾಯಕನಹಳ್ಳಿ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ತನಿಖೆ ಬಳಿಕ ಹೆಚ್ಚಿನ ಮಾಹಿತಿ ತಿಳಿಯಲಿದೆ ಎಂದು ಹೇಳಿದರು.


Related Articles

Back to top button