ಪ್ರಗತಿವಾಹಿನಿ ಸುದ್ದಿ, ಯಲ್ಲಾಪುರ: ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಗೋವನಕೊಪ್ಪ ಗ್ರಾಮದ ಸಣ್ಣವೀರಪ್ಪ ಚನ್ನಬಸಪ್ಪ ಹೊಂಗಲ ಪ್ರತಿಷ್ಠಾನದಿಂದ ಪ್ರವಾಹ ಸಂತ್ರಸ್ತರಿಗೆ ಸಾಮಗ್ರಿ ವಿತರಿಸಲಾಯಿತು.
ಮಂಚಿಕೇರಿ ಸಮೀಪದ ಕಂಪ್ಲಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಸೋಮನಹಳ್ಳಿ ಗ್ರಾಮ ಕುಂಬ್ರಿ ದೇವಿಗದ್ದೆ ಪ್ರದೇಶದಲ್ಲಿ ನೆಲೆಸಿದ ನಿರಾಶ್ರಿತರಿಗೆ ಹಾಸಿಗೆ, ಟವೆಲ್, ಸೀರೆ, ಟಿ-ಶರ್ಟ್, ಚಿಕ್ಕಮಕ್ಕಳಿಗೆ ಬಟ್ಟೆ, ಹೆಣ್ಣು ಮಕ್ಕಳಿಗೆ ಚೂಡಿ ಮತ್ತು ಟಾರ್ಚ್ಗಳನ್ನೂ ವಿತರಿಸಲಾಯಿತು.
ಪ್ರತಿಷ್ಠಾನದ ಸಂಸ್ಥಾಪಕ ಮಹಾಂತೇಶ ಹೊಂಗಲ, ಡಾ. ಶಿವಾನಂದ ಹೊಂಗಲ, ಕುಮಾರಿ ಶೃದ್ಧಾ ಹೊಂಗಲ, ವಿರೇಶ ಅಸುಂಡಿ, ಸ್ಥಳೀಯರಾದ ವೀರೇಂದ್ರ ಹೆಗಡೆ, ಲಲಿತಾ ಹೆಗಡೆ, ಅಧ್ಯಕ್ಷರು ತಾಲೂಕಾ ಅಂಗನವಾಡಿ ನೌಕರರ ಸಂಘ ಹಾಗೂ ಅಮೀನಾಬಿ ಖಾನ್ ಹಾಜರಿದ್ದರು.
ಕುಮಾರಿ ಶೃದ್ಧಾ ಮಹಾಂತೇಶ ಹೊಂಗಲ ಸ್ವಇಚ್ಛೆಯಿಂದ ಮತ್ತು ಉತ್ಸಾಹದಿಂದ ಈ ಸೇವಾ ಕಾರ್ಯದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ