Kannada NewsKarnataka News

ಬೆಳಗಾವಿಗೆ ಬಂದ ಡಿ.ಕೆ.ಶಿವಕುಮಾರ, ಮಿರ್ಚಿ ಬಜೆ ಸೇವಿಸಿದ ಕೆಪಿಸಿಸಿ ಅಧ್ಯಕ್ಷ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ಲೋಕಸಭಾ ಉಪಚುನಾವಣೆ ಪ್ರಚಾರಕ್ಕಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಬುಧವಾರ ಸಂಜೆ ಬೆಳಗಾವಿಗೆ ಆಗಮಿಸಿದರು.
ಹುಬ್ಬಳ್ಳಿಯಿಂದ ಬೆಳಗಾವಿಗೆ  ಆಗಮಿಸುವ ವೇಳೆ ಅವರ ಕಾರನ್ನು ಚುನಾವಣೆ ಆಯೋಗದ ಸಿಬ್ಬಂದಿ ಹಿರೇಬಾಗೇವಾಡಿ  ಟೋಲ್ ಗೇಟ್ ಬಳಿ ತಪಾಸಣೆ ನಡೆಸಿದರು.
 ಬೆಳಗಾವಿ ಹೊರವಲಯದಲ್ಲಿ ಡಿ.ಕೆ. ಶಿವಕುಮಾರ್ ಅವರಿಗೆ ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳಿಂದ ಭರ್ಜರಿ ಸ್ವಾಗತ ಕೋರಲಾಯಿತು.
 ನಂತರ  ಬೆಳಗಾವಿಯ ಕಾಂಗ್ರೆಸ್ ಭವನದ ಬಳಿ ಕ್ಯಾಂಟೀನ್ ನಲ್ಲಿ ಬಜ್ಜಿ, ಮಿರ್ಚಿ ಸವಿದ ಡಿ.ಕೆ. ಶಿವಕುಮಾರ್ ತಾವೇ ಸ್ವತಃ ಬಿಲ್ ನೀಡಿದರು.
 ಬೆಳಗಾವಿ ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ  ಶಿವಕುಮಾರ್ ಅವರು  ಸ್ಥಳೀಯ ಮುಖಂಡರ ಜತೆ ಸಮಾಲೋಚನೆ ನಡೆಸಿದರು.

Home add -Advt

Related Articles

Back to top button